ಹೊಸದುರ್ಗ: ‘ಮಠಗಳು ರಾಜಕೀಯದಿಂದ ದೂರವಿದ್ದು, ಸೇವಾಕೇಂದ್ರಗಳಾಗಬೇಕು. ಇದಕ್ಕೆ ಭಕ್ತರ ಸಹಕಾರವೂ ಅಗತ್ಯ’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಿಟಿಗ ಮಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಸುಜ್ಞಾನ ಸಂಗಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಪ್ರಸ್ತುತ ಕಾಲಮಾನದಲ್ಲಿ ಸಾಂಸಾರಿಕ, ವ್ಯಾವಹಾರಿಕ ಅಸಮತೋಲನಕ್ಕೆ ಒಳಗಾಗಿ ಮಾನವ ಜರ್ಜರಿತನಾಗಿದ್ದಾನೆ. ಅವರಿಗೆ ಸೂಕ್ತ ಗುರುವಿನ ಮಾರ್ಗದರ್ಶಕರ ಅವಶ್ಯಕತೆಯಿದೆ. ಇದನ್ನು ಮನಗಂಡು ಶ್ರೀಮಠದಲ್ಲಿ ಪಂಚಾಯಿತಿ ಮಾಡುವ ಮೂಲಕ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಭಕ್ತಾದಿಗಳು ಉದ್ವೇಗಕ್ಕೆ ಒಳಗಾಗದೆ ಸಮಾಧಾನದಿಂದ ಜೀವನ ನಡೆಸಬೇಕು. ಇಂದಿನ ಯುವಪೀಳಿಗೆ ತಂದೆ ತಾಯಿಯೇ ಮೊದಲ ದೇವರು ಎಂಬ ವಾಸ್ತವ ಸತ್ಯವನ್ನು ಅರಿತು, ಅವರ ನೆರಳಿನಲ್ಲಿ ಜೀವನ ನಡೆಸಬೇಕು’ ಕಿವಿಮಾತು ಹೇಳಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ವಿಜಯಲಕ್ಷ್ಮಿ ಜಯರಾಮ್ ಹಾಗೂ ಸಾಹಿತಿ ಸದಾಶಿವ ಡಿ.ಓ ಅವರಿಗೆ ಶ್ರೀಮಠದ ವತಿಯಿಂದ ಅಭಿನಂದಿಸಲಾಯಿತು.

ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಉದ್ಘಾಟಿಸಿದರು. ಕೊರಟಿಕೆರೆ ಲೇಖಕ ನಾಗಭೂಷಣ್ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಸೇವಾ ಬಳಗದ ಅಧ್ಯಕ್ಷ ಎ.ಟಿ. ಕುಮಾರಸ್ವಾಮಿ, ಶಿಕ್ಷಕ ಬಿ. ಇ. ಅಶೋಕ್, ಸಂಗಮೇಶ್ವರ ಸಮುದಾಯ ಭವನ ಸಮಿತಿ ಸದಸ್ಯರು, ಸಂಗಮೇಶ್ವರರ ನೌಕರರ ಸಂಘ, ಸಂಗಮೇಶ್ವರ ಯುವ ವೇದಿಕೆ, ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ, ಶಾಂತವೀರಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಶ್ರೀಮಠದ ಭಕ್ತರಿದ್ದರು.

‘ಕುಂಚಿಟಿಗ ಮಠ ಜಾತ್ಯತೀತ ಪಕ್ಷಾತೀತ ಮಠ’ ‘ಮಠವನ್ನು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಬೆಳೆಸಲು ಇಚ್ಛಿಸಿದ್ದು ಯಾವುದೇ ರಾಜಕೀಯ ವ್ಯಕ್ತಿಗಳ ಪರ ವಿರುದ್ಧವೂ ಇಲ್ಲ. ನಮ್ಮ ಹೆಸರನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ತಕ್ಷಣ ಶ್ರೀಮಠಕ್ಕೆ ತಿಳಿಸಿ. ಮಠಗಳು ಧಾರ್ಮಿಕ ಮತ್ತು ಶೈಕ್ಷಣಿಕ ಸಾಂಸ್ಕೃತಿಕ ಸೇವಾ ಕೇಂದ್ರಗಳಾಗಬೇಕು ಎಂಬುದು ನಮ್ಮ ಆಶಯ. ನಮ್ಮನ್ನು ಮತ್ತು ಮಠವನ್ನು ಯಾವುದೇ ಕಾರಣಕ್ಕೂ ಜಾತಿಗೆ ಪಕ್ಷಕ್ಕೆ ಗುರುತಿಸುವ ಅವಕಾಶ ಕೊಡಬೇಡಿ’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.