ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಚಿತ್ರದಲ್ಲೇ ಮುರುಘಾ ಪರಂಪರೆ ಅನಾವರಣ

ಚಿತ್ರಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ ಕೈಯಿಂದ ಹರಳಿದ ಭಾವಚಿತ್ರಗಳು
Last Updated 16 ಅಕ್ಟೋಬರ್ 2018, 19:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಶೂನ್ಯಪೀಠ ಹಾಗೂ ಮುರುಘಾ ಪರಂಪರೆಯ ಸ್ವಾಮೀಜಿಗಳ ಐತಿಹಾಸಿಕ ಘಟನಾವಳಿ ಒಳಗೊಂಡ ಭಾವಚಿತ್ರಗಳು ಶ್ರೀಮಠದಲ್ಲಿ ಚಿತ್ರಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ ಅವರ ಕೈಯಿಂದ ಅನಾವರಣಗೊಂಡವು.

ಶ್ರೀಮಠದ ರಾಜಾಂಗಣದಲ್ಲಿ ಮಂಗಳವಾರ ನಡೆದ ಭಾವಚಿತ್ರ ಪ್ರದರ್ಶನವನ್ನು ಶಿವಮೂರ್ತಿ ಶರಣರು ಉದ್ಘಾಟಿಸಿದರು.

ಪ್ರದರ್ಶನದಲ್ಲಿ ಶೂನ್ಯ ಪರಂಪರೆಯ ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ದರಾಮೇಶ್ವರ, ಅನಾದಿ ಗಣನಾಥ, ಆದಿ ಗಣೇಶ್ವರ, ನಿರ್ಮಾಯ ಗಣೇಶ್ವರ, ನಿರಂಜನ ಸ್ವಾಮೀಜಿ, ಜ್ಞಾನಾನಂದ ಸ್ವಾಮೀಜಿ, ಆತ್ಮ ಗಣನಾಥ, ಆಧ್ಯಾತ್ಮ ಗಣನಾಥ, ರುದ್ರಮುನಿ (ತಿಪ್ಪೇರುದ್ರ) ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಆದಿಲಿಂಗ ಸ್ವಾಮೀಜಿ, ಚೆನ್ನವೀರ ಸ್ವಾಮೀಜಿ, ಗೋಸಲ ಸಿದ್ದೇಶ್ವರ ಸ್ವಾಮೀಜಿ, ಶಂಕರೇಶ್ವರ ಸ್ವಾಮೀಜಿ, ದಿವ್ಯಲಿಂಗೇಶ್ವರ ಸ್ವಾಮೀಜಿ, ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ತೋಂಟದ ಸಿದ್ದಲಿಂಗೇಶ್ವರ ಸ್ವಾಮೀಜಿ, ನಿರಕ್ಷರ ಬೋಳಬಸವೇಶ್ವರ ಸ್ವಾಮೀಜಿ, ಗುಮ್ಮಳಾಪುರದ ಸಿದ್ದಲಿಂಗ ಸ್ವಾಮೀಜಿ, ಗೂಳೂರು ಸಿದ್ದವೀರ ಸ್ವಾಮೀಜಿ, ಗಗನದಾರ್ಯ ಸ್ವಾಮೀಜಿ, ಕಟ್ಟಿಗೆಹಳ್ಳಿ ಸಿದ್ದಲಿಂಗ ಸ್ವಾಮೀಜಿ ಅವರ ಭಾವಚಿತ್ರಗಳು ಆಕರ್ಷಣೀಯವಾಗಿದ್ದವು.

ಮುರಿಗೆ ಶಾಂತವೀರ ಸ್ವಾಮೀಜಿ ಅವರ ಕಾಲದಿಂದ ಸಾಗಿಬಂದ ಗುರುಪರಂಪರೆಯ ಮುರಿಗೆ ಶಾಂತವೀರ ದೇಶಿಕರು (1ನೇಯ ಮುರಿಗೆ ಸ್ವಾಮೀಜಿ), ಗುರುಸಿದ್ದ ಸ್ವಾಮೀಜಿ (ಇಮ್ಮಡಿ ಮುರಿಗೆ ಸ್ವಾಮೀಜಿ), ಸ್ವಾದಿ ಚೆನ್ನಬಸವ ಸ್ವಾಮೀಜಿ, ಶಿರಹಟ್ಟಿ ಸಿದ್ದಲಿಂಗ ಸ್ವಾಮೀಜಿ, ನಾಯಕನಹಟ್ಟಿ (ದೊಡ್ಡ) ಗುರುಪಾದ ಸ್ವಾಮೀಜಿ, ಮೂರುಸಾವಿರದ (ಸಣ್ಣ) ಗುರುಪಾದ ಸ್ವಾಮೀಜಿ, ಮೂರುಸಾವಿರ ಸಿದ್ದಲಿಂಗ ಸ್ವಾಮೀಜಿ, ಒಪ್ಪೊತ್ತಿನ ಚೆನ್ನವೀರ ಸ್ವಾಮೀಜಿ, ನೈಘಂಟಿನ ಸಿದ್ದಬಸವ ಸ್ವಾಮೀಜಿ, ಸಣ್ಣಬರಹದ ರಾಚವಟ್ಟಿ ಸ್ವಾಮೀಜಿ, ಸಾವಳಿಗೆ ಗುರುಶಾಂತ ಸ್ವಾಮೀಜಿ, ಸಣ್ಣಪಾದದ ಚನ್ನವೀರ ಸ್ವಾಮೀಜಿ, ಶಿರಸಂಗಿ ಮಹಾಲಿಂಗ ಸ್ವಾಮೀಜಿ, ಹೆಬ್ಬಾಳು ರುದ್ರ ಸ್ವಾಮೀಜಿ, ಬ್ಯಾಡಗಿ ಮುಪ್ಪಿನ ಸ್ವಾಮೀಜಿ , ಜಯದೇವ ಸ್ವಾಮೀಜಿ, ಜಯವಿಭವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಈಗಿನ ಶರಣರ ಭಾವಚಿತ್ರಗಳು ಗಮನ ಸೆಳೆದವು.

ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಕೃಷಿ ಸಚಿವ ಶಿವಶಂಕರ ರೆಡ್ಡಿ, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ರೈತ ಮುಖಂಡ ನುಲೇನೂರು ಶಂಕರಪ್ಪ, ಎಸ್‌ಜೆಎಂ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಕಣ್ಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT