ಇಬ್ಬರು ರೈತರು ಆತ್ಮಹತ್ಯೆ

7

ಇಬ್ಬರು ರೈತರು ಆತ್ಮಹತ್ಯೆ

Published:
Updated:

ಚಳ್ಳಕೆರೆ: ಸಾಲ ಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಳಕು ಹೋಬಳಿಯ ಚಿಕ್ಕಹಳ್ಳಿಯ ಜಿ.ಟಿ.ರಾಜೇಂದ್ರ ರೆಡ್ಡಿ (31) ಹಾಗೂ ಹನುಮಂತನಹಳ್ಳಿಯ ಆಂಜನೇಯ (46) ಆತ್ಮಹತ್ಯೆ ಮಾಡಿಕೊಂಡವರು.

ಚಿಕ್ಕಹಳ್ಳಿಯ ಗಿರಿಜಮ್ಮ ಹಾಗೂ ತಿಪ್ಪಾರೆಡ್ಡಿ ದಂಪತಿಯ ಪುತ್ರ ರಾಜೇಂದ್ರ ಇನ್ನೂ ಅವಿವಾಹಿತ. 25 ಎಕರೆ ಜಮೀನು ಹೊಂದಿದ್ದು, ಐದು ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿರಲಿಲ್ಲ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ₹ 4.5 ಲಕ್ಷ ಹಾಗೂ ₹ 3 ಲಕ್ಷ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆರು ಎಕರೆ ಜಮೀನಿನಲ್ಲಿ ಹಾಕಿದ್ದ ಶೇಂಗಾ ಹಾಗೂ ಈರುಳ್ಳಿ ಬೆಳೆ ಕೈಸೇರದ ಪರಿಣಾಮ ಹತಾಶಗೊಂಡಿದ್ದರು. ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಜಮೀನಿನಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹನುಮಂತನಹಳ್ಳಿಯ ಆಂಜನೇಯ ಅವರು 9 ಎಕರೆ ಜಮೀನು ಹೊಂದಿದ್ದಾರೆ. ಕೃಷಿಗಾಗಿ ಅಲ್ಲಲ್ಲಿ ಕೈಸಾಲ ಮಾಡಿಕೊಂಡಿದ್ದರು ಎಂದು ತಳಕು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !