ಹೊಳಲ್ಕೆರೆ: ಈ ಬಾರಿಯ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹ 3 ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಗ್ರಹಿಸಿದರು.

ತಾಲ್ಲೂಕಿನ ಈಚಘಟ್ಟದಲ್ಲಿ ರೈತಸಂಘದ ಗ್ರಾಮಶಾಖೆ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹ 5,000 ಕೋಟಿ, ರಾಜ್ಯ ಸರ್ಕಾರ ₹ 2,000 ಕೋಟಿ ನೀಡಿದ್ದರೆ ಕಾಮಗಾರಿ ಮುಗಿಯುತ್ತಿತ್ತು. ತುಂಗಾದಿಂದ ಭದ್ರಾ ಜಲಾಶಯಕ್ಕೆ 17.5 ಟಿಎಂಸಿ ನೀರು ಬರಬೇಕಿದ್ದು, ಈ ಕಾಮಗಾರಿಯೂ ಮುಗಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿರಿಗೆರೆ ಶ್ರೀಗಳ ಸೂಚನೆಯಂತೆ ಡಿಸಿಎಂ ಡಿ.ಕೆ. ಶಿವಕುಮಾರ್, ತರೀಕೆರೆ ಶಾಸಕ ಶ್ರೀನಿವಾಸ್ ಹಾಗೂ ಶಾಸಕ ಚಂದ್ರಪ್ಪ ಅವರ ಶ್ರಮದಿಂದ ಅಜ್ಜಂಪುರ ಹತ್ತಿರದ ಅಬ್ಬಿನ ಹೊಳಲು ಗ್ರಾಮದ ಭೂಸ್ವಾದೀನ ಸಮಸ್ಯೆ ಮುಗಿದಿದೆ. ಅಲ್ಲಿನ ಕಾಮಗಾರಿ ಮುಗಿದರೆ ಜಿಲ್ಲೆಗೆ ನೀರು ಬರುವ ವಿಶ್ವಾಸ ಇದೆ. ರಾಜ್ಯ ಸರ್ಕಾರ ನೀರು, ವಿದ್ಯುತ್, ರೈತರ ಬೆಳೆಗೆ ಉತ್ತಮ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಈಚಘಟ್ಟ ಗ್ರಾಮ ಘಟಕದ ಅಧ್ಯಕ್ಷರಾಗಿ ಎಲ್.ಆರ್. ಮಹಾರುದ್ರಪ್ಪ, ಗೌರವಾಧ್ಯಕ್ಷರಾಗಿ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲೇಶಪ್ಪ, ಕಾರ್ಯಾಧ್ಯಕ್ಷರಾಗಿ ಡಿ. ಮಹಾರುದ್ರಪ್ಪ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸ್ವಾಮಿ, ಖಜಾಂಚಿಯಾಗಿ ವಿಜಯ್, ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ್, ಮಹಿಳಾ ಘಟಕದ ಅಧ್ಯಕ್ಷರಾಗಿ ರತ್ನಮ್ಮ, ಕಾರ್ಯದರ್ಶಿಯಾಗಿ ಕರಿಯಮ್ಮ, ಆಯ್ಕೆಯಾದರು.

ರೈತಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಕುರುವ ಗಣೇಶ್, ರಾಜ್ಯ ಮುಖಂಡರಾದ ತರಿಕೆರೆ ಮಹೇಶ್, ಹೊನ್ನೂರ್ ಮುನಿಯಪ್ಪ, ಚಿಕ್ಕ ಅಬ್ಬಿಗೆರೆ ನಾಗರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ಸಿದ್ದಪ್ಪ, ರಾಮರೆಡ್ಡಿ, ನಾಗಣ್ಣ, ಸನಾವುಲ್ಲ, ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್ ಆಡನೂರು, ಸಿದ್ದರಾಮಪ್ಪ, ಲೋಕೇಶ್, ಅಜಯ್, ಮಲ್ಲೇಶಪ್ಪ, ವಕೀಲ ಪರಮೇಶ್ವರಪ್ಪ ಮೂಲಿಮನಿ, ಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.