ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೀಡರ್ ಚಾನಲ್ ನಿರ್ಮಾಣಕ್ಕೆ ಮೊದಲ ಆದ್ಯತೆ: ಡಿ.ಸುಧಾಕರ್

Last Updated 22 ಜುಲೈ 2013, 9:46 IST
ಅಕ್ಷರ ಗಾತ್ರ

ಧರ್ಮಪುರ: ಕಳೆದ ಐದು ವರ್ಷಗಳಲ್ಲಿ ವಿವಿಧ ಕಾರಣಗಳಿಂದ ನಾನು ಮಂತ್ರಿಯಾಗಿದ್ದರೂ ಧರ್ಮಪುರ ತಾಲ್ಲೂಕು ರಚನೆ ಮತ್ತು ಧರ್ಮಪುರ ಕೆರೆಗೆ ಫೀಡರ್ ಚಾನಲ್ ಕಲ್ಪಿಸಲು ಮಾಡಿದ ಹೋರಾಟ ಫಲಪ್ರದವಾಗಲಿಲ್ಲ.  ಆದರೆ, ಈಗ ನಮ್ಮದೇ ಕಾಂಗ್ರೆಸ್ ಸರ್ಕಾರ ಇರುವುದರಿಂದ  ಮುಂದಿನ ಐದು ವರ್ಷಗಳಲ್ಲಿ ಈ ಎರಡು ಕೆಲಸಗಳು ತುರ್ತಾಗಿ  ನೆರವೇರಲಿವೆ ಎಂದು ಶಾಸಕ ಡಿ.ಸುಧಾಕರ್ ತಿಳಿಸಿದರು.

ಸಮೀಪದ ಶ್ರವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮುಂದಿನ ಐದು ವರ್ಷದಲ್ಲಿ ತಾಲ್ಲೂಕನ್ನು ಗುಡಿಸಲು ಮುಕ್ತವನ್ನಾಗಿಸುವುದು. ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಮತ್ತು ಬಡ ಜನರು ಗುಳೇ ಹೋಗದಂತೆ ಉದ್ಯೋಗವಕಾಶಗಳನ್ನು ಕಲ್ಪಿಸುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಮಣಿಕ ಪ್ರಯತ್ನ ಮಾಡಲಾಗುವುದು.

ಕಳೆದ ವರ್ಷ ತಾಲ್ಲೂಕಿನಲ್ಲಿ 1200 ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡಿದೆ. ಅದೇ ವರವೆಂಬಂತೆ ನಾನು 1200 ಮತಗಳಿಂದ ಜಯಶೀಲನಾಗಿದ್ದೇನೆ. ಶ್ರವಣಗೆರೆ ಗ್ರಾಮದ ಪ್ರತಿಯೊಂದು ಕೇರಿಗೆ ಸಿಮೆಂಟ್ ರಸ್ತೆ ಮತ್ತು ಮಹಿಳಾ ಭವನ ನಿರ್ಮಿಸಿ ಕೊಡಲಾಗುವುದು. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದೀನ ದಲಿತರಿಗೆ ಆರು ಸಾವಿರ ಕೋಟಿ ಅನುದಾನ ಮತ್ತು ನೀರಾವರಿ ಸೌಕರ್ಯಕ್ಕಾಗಿ ್ಙ 10 ಸಾವಿರ ಕೋಟಿ ಅನುದಾನ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ  ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಎಸ್.ಪ್ರಕಾಶ್, ಮಾಧು, ಅಪ್ಪಾಜಿಗೌಡ, ಲಕ್ಷ್ಮೀದೇವಿ, ತಿಪ್ಪೇಸ್ವಾಮಿ, ದಾಸೇಗೌಡ, ಬಸವರಾಜು, ಹೆಂಜೇರಪ್ಪ, ಹಂಪಣ್ಣ, ಮಧು, ನಾಗಪ್ಪ, ಕೃಷ್ಣಮೂರ್ತಿ, ಕರಿಯಪ್ಪ, ವೀರಣ್ಣ, ಹನುಂತರಾಯ, ಎಚ್.ಜುಂಜಪ್ಪ  ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT