ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಒಟ್ಟು 12,482 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಧಾರ್ಕಾರ್ಡ್ ಹೊಂದಿಲ್ಲದಿರುವುದು ಕಂಡುಬಂದಿದೆ ಎಂದು ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಯೀಮುರ್ ರೆಹಮಾನ್ ತಿಳಿಸಿದರು.
ಇಲ್ಲಿನ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯುತ್ತಿರುವ ಆಧಾರ್ಕಾರ್ಡ್ ನೋಂದಣಿ ಕಾರ್ಯ ವೀಕ್ಷಿಸಿದ ನಂತರ ಅವರು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಒಟ್ಟು 26,620 ವಿದ್ಯಾರ್ಥಿ– ವಿದ್ಯಾರ್ಥಿನಿಯರಿದ್ದು, ಈ ಪೈಕಿ 13,048 ಮಂದಿ ಆಧಾರ್ಕಾರ್ಡ್ ಹೊಂದಿದ್ದಾರೆ. 1,120 ಮಂದಿ ಹೆಸರು ನೋಂದಣಿ ಮಾಡಿಸಿದ್ದು ಕಾರ್ಡ್ ಬರಬೇಕಿದೆ. ಕಾರ್ಡ್ ವಂಚಿತ ವಿದ್ಯಾರ್ಥಿ ಗಳನ್ನು ಸೌಲಭ್ಯ ಅಡಿ ತರಲು ಶಾಲೆ ಗಳಲ್ಲಿಯೇ ಹಂತ, ಹಂತವಾಗಿ ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನೋಂದಣಿ ಸಮಯದಲ್ಲಿ ಸೂಕ್ತ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಬಿಆರ್ಪಿ ಕೆ.ರೇವಣ್ಣ, ಸಿಆರ್ಪಿ ಮೋಹನ್, ಮುಖ್ಯಶಿಕ್ಷಕ ಎಂ.ರುದ್ರಯ್ಯ ಇದ್ದರು.