ಗುರುವಾರ , ನವೆಂಬರ್ 21, 2019
22 °C

ಶಿವಮೊಗ್ಗ: ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲು

Published:
Updated:
Deccan Herald

ಶಿವಮೊಗ್ಗ: ಸೂರ್ಯನ ಕೆಳಗೆ ಚಿಕ್ಕ ಮೋಡದ ಸಾಲು ಚಲಿಸಿದ ಪರಿಣಾಮ ಸೂರ್ಯನ ಸುತ್ತಲೂ ಉಂಗುರ ನಿರ್ಮಾಣವಾಗಿ ವಿಸ್ಮಯ ಮೂಡಿಸಿತ್ತು. ಮಧ್ಯಾಹ್ನ 12.15ರಿಂದ 1.25ರವರೆಗೂ ಆಗಸದಲ್ಲಿ ಮೂಡಿದ ಈ ಉಂಗುರದ ಚಿತ್ತಾರವನ್ನು ಜನರು ಬೀದಿಬೀದಿಗಳಲ್ಲಿ ನಿಂತು ವೀಕ್ಷಿಸುತ್ತಿದ್ದರು. ಮೊಬೈಲ್ ಕ್ಯಾಮೆರಾಗಳ ಮೂಲಕ ಸೆರೆಹಿಡಿದರು.

ಸೂರ್ಯನ ಕಿರಣಗಳು ಭೂಮಿಗೆ ಮೋಡವನ್ನು ಹಾಯ್ದು ಬರುವಾಗ ಏಳುಬಣ್ಣಗಳ ವೃತ್ತಾಕಾರದ ಉಂಗುರ ಮೂಡಲಿದೆ. ಸಾಮಾನ್ಯವಾಗಿ ಅರ್ಧ ಕಾಮನಬಿಲ್ಲು ನೋಡುವ ನಮಗೆ 22° ಹ್ಯಾಲೊ ಎಂದು ಕರೆಯುವ ಈ ವೃತ್ತಾಕಾರದ ಕಾಮನಬಿಲ್ಲು ಅಚ್ಚರಿ ಉಂಟು ಮಾಡುತ್ತದೆ.

‘ಭೂಮಿಯಿಂದ ಸುಮಾರು 20 ಸಾವಿರ ಅಡಿಗಳ ಎತ್ತರದಲ್ಲಿನ ವಾತಾವರಣದಲ್ಲಿ (ಟ್ರೊಪೊಸ್ಫಿಯರ್) ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ಯೀಕರಣಗೊಂಡು ಮಂಜಿನ ಹರಳುಗಳಾಗುತ್ತವೆ’ ಎಂದು ಖಗೋಳ ವಿಜ್ಞಾನ ಹರೋನಹಳ್ಳಿಸ್ವಾಮಿ ಪ್ರತಿಕ್ರಿಯಿಸಿದರು.

ಈ ಗೋಳಾಕಾರದ ಮಂಜಿನ ಹರಳಿನ ಮೂಲಕ ಸೂರ್ಯನ ಬಿಳಿಯ ಬೆಳಕು ಹಲವು ಬಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದರುವಿಕೆಗೆ ಕಾರಣವಾಗುತ್ತದೆ. ಇದರಿಂದಾಗಿ ಸೂರ್ಯನ ಸುತ್ತ 22° ವೃತ್ತಾಕಾರದಲ್ಲಿ ಅದ್ಭುತ ಕಾಮನಬಿಲ್ಲು ಮೂಡುತ್ತದೆ. ಒಮ್ಮೊಮ್ಮೆ ಚಂದ್ರನ ಸುತ್ತಲೂ ಇಂಥ ಕಾಮನಬಿಲ್ಲುಗಳು ಕಂಡುಬರುವುದು ಉಂಟು.

ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನೂ ಇದು ನೀಡುತ್ತದೆ. ಇದು ನಿಸರ್ಗದ ಬೆಳಕಿನ ಬಣ್ಣದ ಆಟವೇ ಆಗಿದ್ದು ನೋಡಲು ಮನಮೋಹಕವಾಗಿರುತ್ತದೆ.

ಪ್ರತಿಕ್ರಿಯಿಸಿ (+)