ಮಂಗಳವಾರ, ಏಪ್ರಿಲ್ 7, 2020
19 °C

ಮಾಂಸ ಖರೀದಿಗೆ ಮುಗಿಬಿದ್ದ ನಾಗರಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಯುಗಾದಿ ಮುಗಿಸಿದ ಜನರು ಇಂದು ವರ್ಷದ ತೊಡಕು ನೆಪವಾಗಿಟ್ಟುಕೊಂಡು ಮಾಂಸ ಖರೀದಿಗೆ ಮುಗಿಬಿದ್ದರು.

ವಿನೋಬನಗರ, ಮೀನುಮಾರುಕಟ್ಟೆ, ದುರ್ಗಿಗುಡಿ, ಕೆ.ಆರ್.ಪುರಂ ಮೊದಲಾದ ಭಾಗಗಳಲ್ಲಿ ಮಾಂಸ ಖರೀದಿ ಜೋರಾಗಿತ್ತು. ಬೇಡಿಕೆ ಹೆಚ್ಚಳದ ದುರ್ಲಾಭ ಪಡೆದ ಮಾಂಸದ ಅಂಗಡಿ ಮಾಲೀಕರು ಕೆ.ಜಿ. ಮಾಂಸಕ್ಕೆ 700 ರು. ಇಂದು 1000 ರು. ತನಕ ಮಾರಾಟ ಮಾಡಿದರು.

ಅಂತರ ಕಾಪಾಡಿಕೊಳ್ಳಲು ಸುರಕ್ಷಾ ಗೆರೆ ಪಟ್ಟಿಯ ಒಳಗೆ ನಿಂತು ಖರೀದಿಸುವಂತೆ ಬಹುತೇಕ ಜನರು ತಾಕೀತು ಮಾಡುತ್ತಿದ್ದರು. ಆದರೆ, ಯಾರೂ ಅತ್ತ ನಿಗಾ ವಹಿಸಲೇ ಇಲ್ಲ. ದಿನಸಿ ಅಂಗಡಿಗಳೂ ತೆರೆದಿದ್ದವು. ಅಲ್ಲಿಯೂ ನೂಕುನುಗ್ಗಲು ಇತ್ತು. ಕೆಲವು ಅಧಿಕಾರಿಗಳು ಬಾಗಿಲು ಮುಚ್ಚಿಸುತ್ತಿದ್ದರೆ, ಇನ್ನು ಕೆಲವರು ಸರತಿ ಸಾಲಿನಲ್ಲಿ ನಿಲ್ಲಿಸಿ ಖರೀದಿಗೆ ಅವಕಾಶ ಮಾಡಿಕೊಟ್ಟರು.

ಔಷಧ ಅಂಗಡಿಗಳಲ್ಲೂ ಜನ ಸಂದಣಿ ಇತ್ತು. ಕೆಲವು ಭಾಗಗಳಲ್ಲಿ ಜನರು ಬೆಳಗಿನ ವಾಯುವಿಹಾರ ಮಾಡಿದರು. ಮಕ್ಕಳನ್ನೂ ಕರೆತಂದಿದ್ದರು. ಲಕ್ಷ್ಮೀ ಚಿತ್ರಮಂದಿರದ ಬಳಿ ತರಕಾರಿ ಖರೀದಿಸಲು ಜನ ದಟ್ಟಣೆ ಕಂಡು ಬಂತು.

ಮಧ್ಯಾಹ್ನದವರೆಗೂ ದ್ವಿಚಕ್ರ ವಾಹನ, ಕಾರುಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಓಡಾಡುತ್ತಲೇ ಇದ್ದರು. ಮಧ್ಯಾಹ್ನದ ನಂತರ ಸಂಚಾರ ಸಂಪೂರ್ಣ ನಿಯಂತ್ರಣದಲ್ಲಿತ್ತು.  ಸಂಜೆಯ ವೇಳೆಗೆ ರಸ್ತೆಗಿಳಿದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು