ಭಾನುವಾರ, ಜೂನ್ 13, 2021
25 °C

ಕಲಬುರ್ಗಿ: ಕೊರೊನಾಗೆ 7 ಮಂದಿ ಸಾವು, 742 ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೆ ಏಳು ಜನ ಮೃತಪಟ್ಟಿದ್ದಾರೆ ಎಂದು ಶನಿವಾರದ ಆರೋಗ್ಯ ಬುಲೆಟಿನ್‌ ತಿಳಿಸಿದೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 417ಕ್ಕೆ ಏರಿದೆ.

ತಿಲಕ ನಗರದ 48 ವರ್ಷದ ಪುರುಷ, ಮಹಾತ್ಮ ಬಸವೇಶ್ವರ ನಗರದ 50 ವರ್ಷದ ಪುರುಷ, ಶಹಾಬಜಾರ್‌ನ 62 ವರ್ಷದ ವೃದ್ಧ, ಮಹಾದೇವ ನಗರದ 68 ವರ್ಷದ ಇನ್ನೊಬ್ಬ ವೃದ್ದ, ಕುವೆಂಪು ನಗರದ 59 ವರ್ಷ ಮಹಿಳೆ, ಮೆಕ್ಕಾ ಕಾಲೊನಿಯ 68 ವರ್ಷದ ವೃದ್ಧೆ, ಚಿತ್ತಾಪುರ ತಾಲ್ಲೂಕಿನ ಟೆಂಗಳಿಯ 40 ವರ್ಷದ ಪುರುಷ ಮೃತಪಟ್ಟವರು.

742 ಮಂದಿಗೆ ಪಾಸಿಟಿವ್‌: ಹೊಸದಾಗಿ ಮತ್ತೆ 742 ಮಂದಿಗೆ ಕೊರೊನಾ ಸೋಂಕು ಅಂಟಿಕೊಂಡಿದ್ದು, ಶುಕ್ರವಾರ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 33037ಕ್ಕೆ ಏರಿದೆ.

ಅದೇ ರೀತಿ 210 ಮಂದಿಗೆ ಸೋಂಕಿನಿಂದ ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 26394ಕ್ಕೆ ಏರಿಕೆಯಾಗಿದೆ. 6226 ಸಕ್ರಿಯ ಪ್ರಕರಣಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು