ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚರಣೆಗೆ ಅರ್ಥ ತರೋಣ

ಅಕ್ಷರ ಗಾತ್ರ

ರಾಜ್ಯದ ಜನರು ರಥೋತ್ಸವಗಳಲ್ಲಿ ಪಾಲ್ಗೊಂಡು ಭಕ್ತಿ–ಭಾವ ಮೆರೆಯುತ್ತಿದ್ದಾರೆ. ರಥಕ್ಕೆ ಬಾಳೆಹಣ್ಣು ಎಸೆಯುವುದು ನಮ್ಮ ಸಂಪ್ರದಾಯ. ಆದರೆ  ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಹಣ್ಣು, ಮಕ್ಕಳಾದಿಯಾಗಿ ವೃದ್ಧರೂ ಸೇವಿಸಿ, ಶೀಘ್ರ ಜೀರ್ಣಿಸಿಕೊಳ್ಳಬಹುದಾದ ಹಣ್ಣಾಗಿದೆ. ಇಂತಹ ಫಲವನ್ನು ರಥಕ್ಕೆ ಎಸೆದು ನಿಷ್ಫಲಗೊಳಿಸುವುದು ಸರಿಯೇ?

ಅಲ್ಲದೆ ರಥದ ಸಂದುಗಳಲ್ಲಿ ಸಿಲುಕುವ ಹಣ್ಣು ನಿಧಾನಕ್ಕೆ ಕೊಳೆಯುತ್ತಾ ತನ್ನೊಂದಿಗೆ ರಥದ ಕಟ್ಟಿಗೆಯನ್ನೂ ಕೊಳೆಯಿಸಿ ಹಾನಿ ಉಂಟು ಮಾಡುತ್ತದೆ. ಭವಿಷ್ಯದಲ್ಲಿ ರಥದ ಸುರಕ್ಷತೆಗೆ ಆತಂಕ ತರುತ್ತದೆ. ಭಕ್ತರ ಹೊಸ ಬಟ್ಟೆ, ತೇರಿನ ಬಟ್ಟೆಗಳೂ ಹಣ್ಣಿನ ದಾಳಿಗೆ ಒಳಗಾಗಿ ಅಂದಗೆಟ್ಟು ನಿರುಪಯುಕ್ತಗೊಳ್ಳುತ್ತವೆ. ಭಕ್ತರ ಮುಖ, ಕಣ್ಣುಗಳನ್ನು  ಗಾಸಿಗೊಳಿಸಿದ ನಿದರ್ಶನಗಳೂ ಇವೆ.

ಆದಕಾರಣ ಈ ಆಚರಣೆಗೆ ಪರ್ಯಾಯವಾಗಿ ಮೃದುವಾದ ಹೂದಳಗಳನ್ನು ಎಸೆದು ಇಲ್ಲವೆ ಕರತಾಡನ, ಜೈಕಾರ ಹಾಕುತ್ತಾ ಭಕ್ತಿ–ಭಾವ ಮೆರೆಯುವುದು ಉಚಿತವಲ್ಲವೇ? ಅತ್ಯುತ್ತಮವಾದ ಈ ಹಣ್ಣನ್ನು ಬಡವರಿಗೆ, ವೃದ್ಧರಿಗೆ ಅರ್ಪಿಸಿ ಈ ಮೂಲಕ ಅಪೌಷ್ಟಿಕತೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆಗೊಳಿಸುವುದು ಅವಶ್ಯವಲ್ಲವೇ? ಇಂಥ ಕೆಲಸದಿಂದ ನಮ್ಮ ಆಚರಣೆಗೆ ಅರ್ಥವೂ ದೈವಕಳೆಯೂ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT