‘ವೈಫಲ್ಯ ಮುಚ್ಚಲು ಅಖಾಡಕ್ಕಿಳಿದ ‘ಕೂಗುಮಾರಿ’ಗಳು..!’

7
ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಸಿಪಿಐ ಮುಖಂಡ ಡಾ.ಸಿದ್ಧನಗೌಡ ಪಾಟೀಲ ವಾಗ್ದಾಳಿ

‘ವೈಫಲ್ಯ ಮುಚ್ಚಲು ಅಖಾಡಕ್ಕಿಳಿದ ‘ಕೂಗುಮಾರಿ’ಗಳು..!’

Published:
Updated:

ವಿಜಯಪುರ:  ‘ಕೇಂದ್ರ ಸರ್ಕಾರ ಹಾಗೂ ಬಿಜೆಪಿ ತನ್ನ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯದಲ್ಲಿ ನಾಲ್ಕೈದು ಕೂಗುಮಾರಿಗಳನ್ನು ಅಖಾಡಕ್ಕಿಳಿಸಿದೆ’ ಎಂದು ಸಿಪಿಐ ಮುಖಂಡ ಡಾ.ಸಿದ್ಧನಗೌಡ ಪಾಟೀಲ ಟೀಕಿಸಿದರು.

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ಶಾಸಕರಾದ ಸಿ.ಟಿ.ರವಿ, ಬಸನಗೌಡಪಾಟೀಲ ಯತ್ನಾಳ ಬಿಜೆಪಿಯ ಕೂಗುಮಾರಿಗಳು. ರಾಜ್ಯದಲ್ಲಿನ ಶಾಂತಿ ಕದಡಲಿಕ್ಕಾಗಿಯೇ ಸದಾ ಮುಸ್ಲಿಂ ವಿರೋಧಿ, ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲಿಕ್ಕಾಗಿಯೇ ಪದೇ ಪದೇ ದೇಶಪ್ರೇಮ, ಗೋ ರಕ್ಷಣೆಯಂತಹ ವಿಷಯ ಪ್ರಸ್ತಾಪಿಸುತ್ತಿದೆ. ವಿಜಯಪುರ ಶಾಸಕ ಬಸನಗೌಡ, ಬಸವ ಜನ್ಮಭೂಮಿ ಪ್ರತಿನಿಧಿಸುವವರು. ಮೌಢ್ಯ ಹೊಂದಿರುವ ಮೂಢನಲ್ಲ. ಪಕ್ಷದ ವರಿಷ್ಠರನ್ನು ಮೆಚ್ಚಿಸಲು ಬಸವ ಧರ್ಮಕ್ಕೆ ದ್ರೋಹ ಎಸಗಿ, ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ನಾಯಕನಾಗುವ ಬದಲು, ಖಳನಾಯಕನಾಗಲು ಮುಂಚೂಣಿಯಲ್ಲಿದ್ದಾರೆ’ ಎಂದು ಪಾಟೀಲ ಕಿಡಿಕಾರಿದರು.

‘ಪಾಕಿಸ್ತಾನ ತೋರಿಸಿ ಹಿಂದೂಸ್ತಾನ ಆಳಲು ಮುಂದಾಗಬೇಡಿ. ಬಸನಗೌಡಗೆ ಬುದ್ಧಿಯ ಕೊರತೆ ಇರುವುದರಿಂದ ಬುದ್ಧಿವಂತರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಬುದ್ಧಿವಂತರನ್ನು ಕಂಡರೇ ಹೆದರಿಕೆ, ಭಯಂಕರ ಭಯವಿದೆ’ ಎಂದು ಸಿದ್ಧನಗೌಡ ಛೇಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !