ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವಾಗಿದ್ದ ಎರಡು ಬೈಕ್ ವಶ– ಇಬ್ಬರ ಬಂಧನ

Last Updated 30 ಮಾರ್ಚ್ 2023, 5:45 IST
ಅಕ್ಷರ ಗಾತ್ರ

ಮಂಗಳೂರು: ಕಳವಾಗಿದ್ದ ಎರಡು ಬೈಕ್‌ಗಳನ್ನು ಪೊಲೀಸರು ಬುಧವಾರ ಮಲ್ಲಿಕಟ್ಟೆಯಲ್ಲಿ ಪತ್ತೆಹಚ್ಚಿದ್ದು, ಅವುಗಳನ್ನು ಚಲಾಯಿಸುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

‘ಚಿತ್ರದುರ್ಗ ಜೋಗಿಮಟ್ಟಿ ವೃತ್ತದ ಬಳಿಯ ನಿವಾಸಿ ಫಾರಿಶ್ ಶರ್ಮಾ ಅಲಿಯಾಸ್‌ ಗಿಲ್ಲು (19 ವರ್ಷ) ಹಾಗೂ ಚಿತ್ರದುರ್ಗ ಚಳ್ಳಕೆರೆ ರಸ್ತೆ ಬಳಿಯ ಐಯುಡಿಪಿ ಬಡಾವಣೆಯ ನಿವಾಸಿ ಧನುಷ್ (20 ವರ್ಷ) ಬಂಧಿತರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮಲ್ಲಿಕಟ್ಟೆಯ ಬಳಿ ಇಬ್ಬರು ಯುವಕರು ಪ್ರತ್ಯೇಕ ಬೈಕ್‌ಗಳಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದರು. ಪೊಲೀಸರು ಅವರನ್ನು ತಡೆದು ಪರಿಶೀಲನೆ ನಡೆಸಿದ್ದರು. ಒಬ್ಬ ಯುವಕ ಚಲಾಯಿಸುತ್ತಿದ್ದ ಯಮಹಾ ಆರ್ ಎಕ್ಸ್ 100 ಬೈಕ್ ಕಪಿತಾನಿಯೊ ಬಳಿ ಕಳವಾಗಿದ್ದ ಬಗ್ಗೆ ಹಾಗೂ ಇನ್ನೊಬ್ಬ ಯುವಕ ಚಲಾಯಿಸುತ್ತಿದ್ದ ಬಜಾಜ್ ಪಲ್ಸರ್ ಬೈಕ್ ವೆಲೆನ್ಸಿಯಾ ಬಳಿ ಕಳವಾಗಿದ್ದ ಬಗ್ಗೆ ಸಂಬಂಧಪಟ್ಟ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಯುವಕರು ಚಲಾಯಿಸುತ್ತಿದ್ದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಅಂದಾಜು ಮೌಲ್ಯ ₹ 85 ಸಾವಿರ’ ಎಂದು ಪೊಲೀಸರು ಮಾಹಿತಿ ನೀಡಿದರು.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT