ಉಳ್ಳಾಲ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಮಾಡಿದ ಕುಟುಂಬಕ್ಕೆ ಹಾಗೂ ಅಗಲಿದ ವ್ಯಕ್ತಿಗೆ ದೇರಳಕಟ್ಟೆ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಿಂದ ಗೌರವಪೂರ್ಣ ವಿದಾಯ ಸಲ್ಲಿಸಲಾಯಿತು.

ಮಿದುಳಿನ ಆಂತರಿಕ ರಕ್ತಸ್ರಾವದಿಂದ ಕುಸಿದುಬಿದ್ದ 55 ವರ್ಷದ ವ್ಯಕ್ತಿಯನ್ನು ಜ.19ರಂದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳು ನಿಷ್ಕ್ರಿಯಗೊಂಡ ಬಗ್ಗೆ ವೈದ್ಯರ ತಂಡ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಜತೆಗೆ ಅಂಗಾಂಗ ದಾನದ ಸಾಧ್ಯತೆ ಬಗ್ಗೆಯೂ ತಿಳಿಸಿತ್ತು. ಇದಕ್ಕೆ ಕುಟುಂಬದವರೂ ಒಪ್ಪಿದ್ದು, ಕಾನೂನು ಶಿಷ್ಟಾಚಾರ ನಡೆಸಿದ ವೈದ್ಯರ ತಂಡ ಬುಧವಾರ ಅಂಗಾಂಗ ದಾನದ ಪ್ರಕ್ರಿಯೆಯನ್ನು ಕೈಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.