ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮಡಕೆ, ದೀಪ ತಯಾರಿಕೆ ಘಟಕದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ

Published 20 ಏಪ್ರಿಲ್ 2024, 4:53 IST
Last Updated 20 ಏಪ್ರಿಲ್ 2024, 4:53 IST
ಅಕ್ಷರ ಗಾತ್ರ

ಮಂಗಳೂರು: ಮಣ್ಣಿನ ದೀಪ, ಮಡಕೆ ತಯಾರಿ ಮುಂತಾದ ಸಾಂಪ್ರದಾಯಿಕ ಕುಲಕಸುಬಿನಲ್ಲಿ ತೊಡಗಿರುವವರನ್ನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಶುಕ್ರವಾರ ಭೇಟಿಯಾಗಿ ಮತ ಕೇಳಿದರು. ಸುರತ್ಕಲ್ ಬಳಿಯ ಕುಳಾಯಿ ಮನೋಜ್ ಕುಲಾಲ್ ಅವರ ಕುಂಬಾರಿಕೆ ಘಟಕದಲ್ಲಿ ಸ್ವಲ್ಪ ಹೊತ್ತು ಕಳೆದ ಅವರು ಮಡಕೆ ತಯಾರಿಸುವ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.

ಗುಡಿ ಕೈಗಾರಿಕೆಯಲ್ಲಿ ಒಂದಾಗಿರುವ ಮಣ್ಣಿನ ಸ್ಪರ್ಶದ ಘಟಕಗಳು ಈಗ ಮರೆಯಾಗುತ್ತಿದ್ದು ಪ್ಲಾಸ್ಟಿಕ್ ಮತ್ತು ಅಲ್ಯುಮಿನಿಯಂ ಪಾತ್ರೆಗಳು ಜನರ ಮನೆಗಳಲ್ಲಿ ರಾರಾಜಿಸುತ್ತಿವೆ ಎಂಬ ಬೇಸರದ ನುಡಿಗಳನ್ನು ಆಲಿಸಿದ ಚೌಟ, ಕೇಂದ್ರ ಸರ್ಕಾರ ಕುಲಕಸುಬು ಆಧಾರಿತ ವೃತ್ತಿಗಳಿಗೆ ಬೆಂಬಲ ಹಾಗೂ ಸಹಾಯಹಸ್ತ ನೀಡುತ್ತಿರುವ ಬಗ್ಗೆ ಘಟಕದ ಮಾಲೀಕರ ಗಮನ ಸೆಳೆದರು.

ನರೇಂದ್ರ ಮೋದಿ ಘೋಷಿಸಿರುವ ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಮಣ್ಣಿನ ವಸ್ತುಗಳ ಗುಡಿ ಕೈಗಾರಿಕೆ ಬಗ್ಗೆ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT