ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೋಳಿ: ಚಿರತೆ ಸೆರೆಗೆ ಬೋನು

Last Updated 6 ಅಕ್ಟೋಬರ್ 2021, 4:21 IST
ಅಕ್ಷರ ಗಾತ್ರ

ಮಂಗಳೂರು: ನಗರದ ಮರೋಳಿಯಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿರುವ ಮಾಹಿತಿ ಆಧರಿಸಿ, ಅರಣ್ಯ ಇಲಾಖೆ ಮಂಗಳವಾರ ಬೋನು ಇಟ್ಟಿದೆ.

ಭಾನುವಾರ ಸಂಜೆ ಆಟವಾಡುತ್ತಿದ್ದ ಮಕ್ಕಳು ಚಿರತೆ ಹೋಲುವ ಪ್ರಾಣಿಯೊಂದನ್ನು ನೋಡಿದ್ದರು. ಕೆಲವರು ಮೊಬೈಲ್‌ನಲ್ಲಿ ಅದರ ಚಿತ್ರ ತೆಗೆದಿದ್ದರು. ಅದು ಚಿರತೆಯೇ ಹೌದೆಂದು ಖಚಿತಪಟ್ಟಿರುವ ಕಾರಣ ಅರಣ್ಯ ಇಲಾಖೆ, ಆ ಭಾಗದಲ್ಲಿ ಕ್ಯಾಮೆರಾ ಟ್ರ್ಯಾಪ್ ಮತ್ತು ಬೋನು ಅಳವಡಿಸಿದೆ.

‘ಸ್ಥಳೀಯರು ಹೇಳುವಂತೆ ಚಿರತೆ ಕತ್ತಲಾದ ಮೇಲೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ, ಸಂಜೆಯಾದ ಮೇಲೆ ಮನೆಯಿಂದ ಹೊರ ಹೋಗದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗಿದೆ. ಸ್ಥಳೀಯರ ಮನೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಫೂಟೇಜ್‌ಗಳನ್ನು ಪರಿಶೀಲಿಸಲಾಗಿದ್ದು, ಸೋಮವಾರ ಚಿರತೆ ಕಾಣಿಸಿಕೊಂಡಿಲ್ಲ. ಕೆಲ ದಿನಗಳ ಹಿಂದೆ ಪಚ್ಚನಾಡಿ ಭಾಗದಲ್ಲಿ ಚಿರತೆ ಕಂಡಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದರು’ ಎಂದು ಡಿಸಿಎಫ್ ಡಾ. ದಿನೇಶ್ ಕುಮಾರ್ ತಿಳಿಸಿದರು.

‘ಚಿರತೆ ಸಂಚಾರ ಖಾತ್ರಿಯಾದರೆ, ಹೆಚ್ಚುವರಿ ಬೋನುಗಳನ್ನು ಇಟ್ಟು ಅದನ್ನು ಸೆರೆ ಹಿಡಿಯಲು ಕ್ರಮವಹಿಸಲಾಗುವುದು’ ಎಂದು ಅಧಿಕಾರಿಗಳು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT