ಮಂಗಳೂರು ತಾಲ್ಲೂಕಿನಲ್ಲಿ 111, ಬಂಟ್ವಾಳದಲ್ಲಿ 43, ಪುತ್ತೂರಿನಲ್ಲಿ 17, ಸುಳ್ಯದಲ್ಲಿ 1, ಬೆಳ್ತಂಗಡಿ ತಾಲ್ಲೂಕಿನಲ್ಲಿ 19, ಬೇರೆ ಜಿಲ್ಲೆಗಳ 20 ಮಂದಿಗೆ ಸೋಂಕು ತಗಲಿದೆ. ಈ ಪೈಕಿ 65 ಪುರುಷರು, 47 ಮಹಿಳೆಯರು ಸೇರಿದಂತೆ 112 ಜನರಿಗೆ ರೋಗ ಲಕ್ಷಣಗಳು ಕಂಡು ಬಂದಿವೆ. 56 ಪುರುಷರು, 43 ಮಹಿಳೆಯರು ಸೇರಿದಂತೆ 99 ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.