ಬಂಟ್ವಾಳ: ಇಲ್ಲಿನ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಶ್ರೀ ದುರ್ಗಾ ಚಾರಿಟಬಲ್ಟ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಚಾಲನೆ ನೀಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಎಂದು ಪ್ರಕಾಶ್ ಅಂಚನ್ ಹೇಳಿದರು.
ಇದೇ ವೇಳೆ 1,200 ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಕೃಷಿಕ ಕೂಸಪ್ಪ ಪೂಜಾರಿ ಗೌರವ ವಂದನೆ ಸ್ವೀಕರಿಸಿದರು. ರಾಜೇಶ್ ನೆಕ್ಕರೆ ಅವರು ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್, ಉಪಾಧ್ಯಕ್ಷ ಬಾಲಕೃಷ್ಣ ಜಿ., ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ, ಗ್ರಾಮ ಪಂಚಾಯತಿ ಸದಸ್ಯ ಪೂವಪ್ಪ ಮೆಂಡನ್, ಮುಖ್ಯ ಶಿಕ್ಷಕ ರಮಾನಂದ, ಶ್ರೀದುರ್ಗಾ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ನವೀನ್ ಸೇಸಗುರಿ, ದಿಲೀಪ್ ಡೆಚ್ಚಾರ್, ಪ್ರವೀಣ್ ಗೌಡ, ಅಶ್ವಿನ್, ಪೋಷಕರಾದ ನಾಗೇಶ್ ಎಂ. ನಾಗೇಶ್ ಬಾಳೆಹಿತ್ಲು, ಸುಕುಮಾರ್ ಬಂಟ್ವಾಳ, ಶಿಕ್ಷಕ ಮೌರೀಸ್ ಡಿಸೋಜ ಇದ್ದರು.
ವಿದ್ಯಾರ್ಥಿಗಳ ಸಂತೆ: ಇದೇ ವೇಳೆ ಮ್ಯಾಥ್ಸ್ ಕ್ಲಬ್ ವಿದ್ಯಾರ್ಥಿಗಳು ಅಂಗಡಿ ಮಳಿಗೆ ತೆರೆದು ವ್ಯಾಪಾರ ನಡೆಸಿ ಗಮನ ಸೆಳೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.