ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಭಾರತಿ ಸ್ವಾಮೀಜಿ ಪುರಪ್ರವೇಶ

Last Updated 28 ಅಕ್ಟೋಬರ್ 2020, 4:32 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಕಾಸರಗೋಡು ಜಿಲ್ಲೆಯಲ್ಲಿನ ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ನೂತನ ಯತಿ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಂಗಳವಾರ ಎಡನೀರಿನ ಪುರಪ್ರವೇಶ ಮಾಡಿದರು.

ಕಂಚಿ ಕಾಮಕೋಟಿ ಮಠದಲ್ಲಿ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರಿಂದ ಸೋಮವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ ಅವರು, ಇಲ್ಲಿಗೆ ಮಂಗಳವಾರ ಬಂದರು.

ಅವರನ್ನು ಮಠದ ವತಿಯಿಂದ ಚೆಂಡೆ, ಮದ್ದಳೆ, ವಾದ್ಯ ಪರಿಕರದ ನಿನಾದ, ಪೂರ್ಣ ಕುಂಭದ ಮೂಲಕ ಸ್ವಾಗತಿಸಲಾಯಿತು. ಮಠದ ಸದಸ್ಯರು ಹಾಗೂ ಭಕ್ತಾದಿಗಳು ಸೇರಿದಿದ್ದರು. ಅರ್ಚಕರು, ಹಿರಿಯರು ಸೇರಿ ಗುರುಗಳಿಗೆ ಆರತಿ ಬೆಳಗಿ, ಪ್ರವೇಶದ ವಿಧಿ ವಿಧಾನ ಪೂರೈಸಿದರು. ಭಕ್ತರು ಜಯಘೋಷಗಳನ್ನು ಕೂಗಿದರು. ತುಳಸಿ, ಹೂವಿನ ಹಾರ ಹಾಕಿ ಭಕ್ತಿ ಸಮರ್ಪಿಸಿದರು. ಬ್ರಹ್ಮಕೈ ಕೇಶವಾನಂದ ಸ್ವಾಮೀಜಿಗೆ ಗೌರವ ಸಲ್ಲಿಸಲಾಯಿತು.

ಪಟ್ಟಾಭಿಷೇಕದ ದೇವತಾರ್ಚನೆ, ಹೋಮ, ಹವನ, ಯಾಗಗಳ ಶಾಸ್ತ್ರೋಕ್ತ ವಿಧಿ ವಿಧಾನಗಳ ಮೂಲಕ ಬುಧವಾರ ಪೀಠಾರೋಹಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT