ಬುಧವಾರ, ಸೆಪ್ಟೆಂಬರ್ 18, 2019
25 °C
ಆತ್ಮಹತ್ಯೆಗೆ ಯತ್ನ

ನದಿಯಲ್ಲಿ ಮುಳುಗುತ್ತಿದ್ದ ವೃದ್ಧೆಯ ರಕ್ಷಣೆ

Published:
Updated:
Prajavani

ಉಪ್ಪಿನಂಗಡಿ: ಕಡೇಶಿವಾಲಯ ಬಳಿ ನೇತ್ರಾವತಿ ನದಿಯಲ್ಲಿ ತೇಲಿ ಹೋಗುತ್ತಿದ್ದ ಕಡಬ ತಾಲ್ಲೂಕಿನ ರಾಮಕುಂಜದ ಮಂಜಕ್ಕ (70) ಎಂಬವರನ್ನು ದೋಣಿ ನಡೆಸುತ್ತಿದ್ದ ಅಬ್ಬಾಸ್ ಹಾಗೂ ಕೇಶವ ಗುರುವಾರ ಬೆಳಿಗ್ಗೆ ಮೇಲಕ್ಕೆತ್ತಿ ತಂದಿದ್ದಾರೆ.

‘ಬೆಳಿಗ್ಗೆ 8 ಗಂಟೆ ಸುಮಾರಿಗೆ ನೇತ್ರಾವತಿ ನದಿಯಲ್ಲಿ ತೀರದಲ್ಲಿ ಜನರಿಗಾಗಿ ಕಾಯುತ್ತಿದ್ದಾಗ ಯಾವುದೋ ಒಂದು ವಸ್ತು ತೇಲಿ ಬರುತ್ತಿದ್ದ ಹಾಗೆ ಕಂಡಿತು. ತಕ್ಷಣವೇ ದೋಣಿಯಲ್ಲಿ ಸಮೀಪಕ್ಕೆ ತೆರಳಿದಾಗ ಮಹಿಳೆ ಮುಳುಗೇಳುತ್ತಿದ್ದರು. ತಕ್ಷಣವೇ ಕೇಶವ ಎಂಬವರ ಸಹಾಯದಿಂದ ಅವರನ್ನು ಮೇಲೆತ್ತಲಾಯಿತು’ ಎಂದು ಅಬ್ಬಾಸ್ ತಿಳಿಸಿದ್ದಾರೆ.

ಬಳಿಕ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಮಂಜಕ್ಕನ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

 

Post Comments (+)