ಗುರಿ ಮೀರಿದ ಕೃಷಿ ಸಾಲ ವಿತರಣೆ: ಗರ್ಗ್

7

ಗುರಿ ಮೀರಿದ ಕೃಷಿ ಸಾಲ ವಿತರಣೆ: ಗರ್ಗ್

Published:
Updated:
ಜೈಕುಮಾರ್‌ ಗರ್ಗ್‌

ಮಂಗಳೂರು: ಈ ವರ್ಷ ಮಾರ್ಚ್ ಅಂತ್ಯಕ್ಕೆ ಕಾರ್ಪೊರೇಷನ್ ಬ್ಯಾಂಕ್ ಒಟ್ಟು ₹3,03,184.79 ಕೋಟಿ ವಹಿವಾಟು ನಡೆಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಜೈಕುಮಾರ್ ಗರ್ಗ್ ತಿಳಿಸಿದರು.

ನಗರದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ 21 ನೇ ಮಹಾಸಭೆಯಲ್ಲಿ ಮಾತನಾಡಿದ ಅವರು, ₹ 1,83,315.95 ಕೋಟಿ ಠೇವಣಿ ಸಂಗ್ರಹವಾಗಿದ್ದು, ₹1,19,868.84 ಕೋಟಿ ಸಾಲ ವಿತರಿಸಲಾಗಿದೆ ಎಂದರು.

ವಿಶೇಷ ಕೃಷಿ ಸಾಲ ಯೋಜನೆಯಡಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಕೃಷಿ ಸಾಲವನ್ನು ಬ್ಯಾಂಕ್‌ ವಿತರಿಸಿದೆ. ಕೇಂದ್ರ ಸರ್ಕಾರ ₹13,082 ಕೋಟಿ ಗುರಿ ನೀಡಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನಿಂದ ₹15,976 ಕೋಟಿ ಸಾಲ ವಿತರಿಸಲಾಗಿದ್ದು, ಶೇ 122 ರಷ್ಟು ಸಾಧನೆ ಮಾಡಿದೆ ಎಂದು ಹೇಳಿದರು.

ಬ್ಯಾಂಕಿನ ವಹಿವಾಟಿನಲ್ಲಿ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಡಿಜಿಟಲ್ ವಹಿವಾಟಿಗಾಗಿ ಭೀಮ್‌ ಆ್ಯಪ್‌ ಅನ್ನು ಬ್ಯಾಂಕ್‌ ಬಳಸುತ್ತಿದೆ. ಗ್ರಾಹಕರಿಗೆ ಸುಲಭದಲ್ಲಿ ವಹಿವಾಟು ನಡೆಸಲು ಅನುಕೂಲ ಆಗುವಂತೆ ಸದ್ಯ ಬ್ಯಾಂಕ್‌ ಆ್ಯಪ್‌ನಲ್ಲಿ ಸುಧಾರಣೆ ಮಾಡಲಾಗಿದ್ದು, ಹೊಸ ಮೊಬೈಲ್‌ ಆ್ಯಪ್‌ ‘ಕಾರ್ಪ್‌ ಈಸ್‌’ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ ಮೂಲಕ ಗ್ರಾಹಕರು ತಮ್ಮ ಡೆಬಿಟ್‌ ಕಾರ್ಡ್‌ಗಳನ್ನು ಬ್ಲಾಕ್‌ ಅಥವಾ ಅನ್‌ ಬ್ಲಾಕ್‌ ಮಾಡಬಹುದಾಗಿದೆ ಎಂದು ತಿಳಿಸಿದರು.

ಬ್ಯಾಂಕ್‌ನ ವೆಬ್‌ಸೈಟ್‌ www.corpbank.com ಗೆ ಭೇಟಿ ನೀಡಿ, ಉಳಿತಾಯ ಖಾತೆ ತೆರೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನ್ಯೂ ಕಾರ್ಪ್‌ ಇ–ಪಾಸ್‌ಬುಕ್‌ ಆ್ಯಪ್‌ ಅನ್ನು ಬ್ಯಾಂಕ್‌ ಅಭಿವೃದ್ಧಿ ಪಡಿಸಿದ್ದು, ಈ ಆ್ಯಪ್‌ನ ಮೂಲಕ ಗ್ರಾಹಕರು ತಮ್ಮ 3 ತಿಂಗಳ ವಹಿವಾಟಿನ ಮಾಹಿತಿಯನ್ನು ಎಕ್ಸೆಲ್‌ ಅಥವಾ ಪಿಡಿಎಫ್‌ ಮಾದರಿಯಲ್ಲಿ ಪಡೆಯಬಹುದಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !