ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಅಕ್ರಮ:ಒಬ್ಬ ಆರೋಪಿಯ ಬಂಧನ

7

ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಅಕ್ರಮ:ಒಬ್ಬ ಆರೋಪಿಯ ಬಂಧನ

Published:
Updated:

ಮಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ ಒಂದರ ನೇಮಕಾತಿ ಪ್ರಕ್ರಿಯೆಯಲ್ಲಿ ತನ್ನ ಹೆಸರಿನಲ್ಲಿ ಬೇರೊಬ್ಬನಿಂದ ಪರೀಕ್ಷೆ ಬರೆಸಿ, ಅಕ್ರಮವಾಗಿ ಉದ್ಯೋಗ ಪಡೆದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಬಿಜ್ನೋರ್‌ ಚಾಂದ್‌ಪುರ ನಿವಾಸಿ ನವೀನ್‌ಕುಮಾರ್‌ (25) ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್‌ನಲ್ಲಿ ನೇಮಕಾತಿ ಪರೀಕ್ಷೆ ನಡೆದಿತ್ತು. ನವೀನ್‌ ಪರವಾಗಿ ಬೇರೊಬ್ಬ ಹಾಜರಾಗಿದ್ದ. ಆ ಬಳಿಕ ನಿಟ್ಟೆ ಎಜುಕೇಷನ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯಲ್ಲಿ ತರಬೇತಿಗೆ ನಿಯೋಜಿಸಲಾಗಿತ್ತು. ಅಲ್ಲಿಯೂ ಪರೀಕ್ಷೆ ಬರೆದವನೇ ಹಾಜರಾಗಿ ಬೆರಳಚ್ಚು ನೀಡಿದ್ದ. ಆ ಬಳಿಕ ನವೀನ್‌ ತರಬೇತಿಗೆ ಬಂದಿದ್ದ. ಸಂಶಯದ ಮೇಲೆ ತರಬೇತಿ ಸಂಸ್ಥೆ ಅಧಿಕಾರಿಗಳು ಬ್ಯಾಂಕ್‌ಗೆ ಮಾಹಿತಿ ನೀಡಿದ್ದರು. ಜಂಟಿಯಾಗಿ ಬೆರಳಚ್ಚು ಪರೀಕ್ಷಿಸಿದಾಗ ಅಕ್ರಮ ನಡೆದಿರುವುದು ಖಚಿತವಾಗಿದೆ.

ಪ್ರಕರಣ ದಾಖಲಿಸಿಕೊಂಡ ಕಂಕನಾಡಿ ನಗರ ಠಾಣೆ ಪೊಲೀಸರು, ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !