ವಿಚಾರಣಾಧೀನ ಕೊಲೆ ಆರೋಪಿ ಪೊಲೀಸರ ವಶದಿಂದ ಪರಾರಿ

7

ವಿಚಾರಣಾಧೀನ ಕೊಲೆ ಆರೋಪಿ ಪೊಲೀಸರ ವಶದಿಂದ ಪರಾರಿ

Published:
Updated:
Deccan Herald

ಸುಳ್ಯ: ಇಲ್ಲಿಯ ಸರ್ಕಾರಿ ಬಸ್ ನಿಲ್ದಾಣದ ವಠಾರದಲ್ಲಿ ಶುಕ್ರವಾರ ವಿಚಾರಣಾಧೀನ ಕೊಲೆ ಆರೋಪಿ ಪೊಲೀಸರ ವಶದಿಂದ ಪರಾರಿಯಾಗಿದ್ದಾನೆ.

ಸುಳ್ಯ ತಾಲ್ಲೂಕಿನ ಅಜ್ಜಾವರ ಗ್ರಾಮದ ಬೊಳುಂಬ ನಿವಾಸಿ ಮಹಮ್ಮದ್ ಎಂಬುವರ ಮಗ ಅಬ್ದುಲ್ ಅಜೀಜ್ (35) ಪರಾರಿಯಾದ ಆರೋಪಿ. 

ಇತ್ತೀಚೆಗೆ ಕೇರಳದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಹೊಸ ದುರ್ಗ ಜೈಲ್‌ನಲ್ಲಿ ವಿಚಾರಣಾಧೀನ ಆರೋಪಿ, ಐದು ವರ್ಷಗಳ ಹಿಂದೆ ಸುಳ್ಯ ಬಿಎಸ್‌ಎನ್‌ಎಲ್‌  ಇಲಾಖೆಯಿಂದ ಕಳವು ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಹೊಸದುರ್ಗ ಪೊಲೀಸರು ವಿಚಾರಣೆಗಾಗಿ ಸುಳ್ಯ ನ್ಯಾಯಾಲಯಕ್ಕೆ ಕರೆತಂದಿದ್ದರು.

ವಿಚಾರಣೆ ಬಳಿಕ ವಾಪಸ್‌  ಒಯ್ಯುವ ವೇಳೆ, ಸುಳ್ಯ ಸರ್ಕಾರಿ ಬಸ್ ನಿಲ್ದಾಣ ಆರೋಪಿ ಮೂತ್ರ ವಿಸರ್ಜನೆಗೆ ಮನವಿ ಮಾಡಿದ್ದ. ಈ ಸಂದರ್ಭ ಒಬ್ಬ ಪೊಲೀಸ್ ಅವನ ಜೊತೆಯಲ್ಲೇ ಹೋಗಿದ್ದ. ಆದರೂ ಅಜೀಜ್ ಪೊಲೀಸ್‌ ಸಿಬ್ಬಂದಿಯನ್ನು ತಳ್ಳಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.

ಕೇರಳ ಪೊಲೀಸರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು,  ತಕ್ಷಣ ನಾಕಾಬಂದಿ ಮಾಡಿದ್ದರೂ ಪತ್ತೆ ಆಗಲಿಲ್ಲ. ಶೋಧಕಾರ್ಯ ಮುಂದುವರಿಸಿದ್ದಾರೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೋಲ್ಚಾರ್, ಜಾಲ್ಸೂರು, ಮಂಡೆಕೋಲು, ಆಲೆಟ್ಟಿ ಗ್ರಾಮದಲ್ಲಿ ನಾಕಾಬಂಧಿ ಮಾಡಿದ್ದಾರೆ.

ಉಪ್ಪಿನಂಗಡಿ ಮಹಿಳೆಯ ಕೊಲೆ ಪ್ರಕರಣ ಮತ್ತು ಚೆದಂಬರಿಕ ವೃದ್ಧೆಯ ಕೊಲೆ ಪ್ರಕರಣ ಸಹಿತ ಕೆಲವು ಕಳವು ಪ್ರಕರಣದಲ್ಲಿ ಅಜೀಜ್ ಆರೋಪಿ ಆಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !