ಮೂಡುಬಿದಿರೆ: ಅಸ್ಪೃಶ್ಯತೆ, ಮಾನವ ಬಲಿ, ವರದಕ್ಷಿಣೆ ಮೊದಲಾದ ಅಮಾನವೀಯ ಆಚರಣೆಗಳಿಂದ ಜನರನ್ನು ರಕ್ಷಿಸಿದ ಯೇಸು ನಡೆದ ದಾರಿಯೇ ಮಾನವ ಧರ್ಮ ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೃಷಿಸಿರಿಯ ಮುಂಡ್ರೆದೆಗುತ್ತು ಕೆ.ಅಮರನಾಥ್ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಆಳ್ವಾಸ್ ಕ್ರಿಸ್ಮಸ್ 2025ರಲ್ಲಿ ಅವರು ಮಾತನಾಡಿದರು.

ಎಲ್ಲ ಧರ್ಮಗಳಲ್ಲೂ ಪ್ರೀತಿ ಮತ್ತು ನೀತಿ ಅಡಗಿದ್ದು, ಯಾವ ಧರ್ಮವೂ ಇದಕ್ಕೆ ಹೊರತಲ್ಲ ಎಂಬ ಸತ್ಯವನ್ನು ಜಗತ್ತಿಗೆ ಸಾರಿದ್ದಾರೆ. ಅಹಂಕಾರ ಮತ್ತು ದ್ವೇಷ ತೊರೆದು ಒಳ್ಳೆಯದನ್ನೇ ಬಯಸುವ ಬದುಕು ಮಾನವೀಯತೆಗೆ ದಾರಿ ಎಂದು ತಿಳಿಸಿದ ದೇವಮಾನವ ಯೇಸು. ಅಟಲ್ ಬಿಹಾರಿ ವಾಜಪೇಯಿ ಅವರು ಕ್ರೈಸ್ತ ಧರ್ಮದ ಸೇವೆ, ತ್ಯಾಗ ಮತ್ತು ಕ್ಷಮೆಯ ಮೌಲ್ಯಗಳನ್ನು ಗೌರವಿಸಿದ್ದರೆ, ಮಹಾತ್ಮ ಗಾಂಧೀಜಿ ಯೇಸುವಿನ ಅಹಿಂಸೆ ಹಾಗೂ ಮಾನವೀಯತೆಯನ್ನು ಅನುಸರಿಸಿದ್ದರು ಎಂದರು.

ಮಂಗಳೂರಿನ ಸೇಂಟ್ ಜೂಜ್ ವಾಜ್ ಹೋಮ್ನ ನಿವೃತ್ತ ಹಿರಿಯ ಧರ್ಮಗುರು ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಅವರನ್ನು ಗೌರವಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಎಲ್ಲ ಧರ್ಮಗಳ ಹಬ್ಬಗಳನ್ನು ಆಳ್ವಾಸ್ ಸಮಾನ ಗೌರವದಿಂದ ಆಚರಿಸಿಕೊಂಡು ಬಂದಿದೆ. ಹಬ್ಬಗಳ ಆಚರಣೆ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳಾಗಿರದೆ, ವಿದ್ಯಾರ್ಥಿಗಳಲ್ಲಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸೌಹಾರ್ದ ಬೆಳೆಸುವ ಶೈಕ್ಷಣಿಕ ವೇದಿಕೆಯಾಗಿ ರೂಪುಗೊಂಡಿದೆ ಎಂದರು.

ಗೋದಲಿಯಲ್ಲಿ ಬಾಲ ಯೇಸುವಿನ ಜನನದ ದರ್ಶನ, ವಿದ್ಯಾರ್ಥಿಗಳಿಂದ ಕ್ಯಾರಲ್ ಗಾಯನ, ಸಾಂಟಾಕ್ಲಾಸ್ನ ಆಗಮನ, ವಿದ್ಯುದ್ದೀಪಾಲಂಕೃತ ಕ್ರಿಸ್ಮಸ್ ಮರ ಹಾಗೂ ಸಭಾಂಗಣ ಸಂಭ್ರಮವನ್ನು ಹೆಚ್ಚಿಸಿರು.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು, ಕನ್ನಡ, ಕೊಂಕಣಿ, ಮಲಯಾಳಂ, ಹಿಂದಿ ಸೇರಿ ವಿವಿಧ ಭಾಷೆಗಳಲ್ಲಿ ಕ್ಯಾರಲ್ ಹಾಡಿದರು. ವಿದ್ಯಾರ್ಥಿಗಳು ಏಂಜೆಲ್ಸ್ ಮತ್ತು ಸಾಂಟಾಕ್ಲಾಸ್ ವೇಷಧರಿಸಿದ್ದರು. ಗಿರಿಧರ್ ತಂಡದ ಸದಸ್ಯರು ಗಾಯನ ನಡೆಸಿಕೊಟ್ಟರು. ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ರೋಷನ್ ಪಿಂಟೊ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು. ಅಲಂಗಾರಿನ ಹೋಲಿ ರೋಸರಿ ಚರ್ಚ್ ಮುಖ್ಯ ಧರ್ಮಗುರು ಫಾ.ಮೆಲ್ವಿನ್ ನರೋನಾ ಪ್ರಾರ್ಥಿಸಿದರು. ರಂಗ್ ತರಂಗ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.