ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಡ್ಕ: ಹೆದ್ದಾರಿ ಸಂಚಾರವೇ ದುಸ್ತರ, ಹೊಂಡಕ್ಕೆ ಬೀಳುವ ಭೀತಿ

Last Updated 9 ಜುಲೈ 2022, 5:52 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಕಲ್ಲಡ್ಕ ಪೇಟೆಯಲ್ಲಿ ಹಾದು ಹೋಗಿರುವ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಅಲ್ಲಲ್ಲಿ ಹೊಂಡ ತೆಗೆಯಲಾಗಿದ್ದು, ಪ್ರತಿದಿನ ರಸ್ತೆಯಲ್ಲಿ ಲಾರಿ ಮತ್ತಿತರ ವಾಹನ ಹೂತು ಹೋಗುತ್ತಿವೆ.

ಶುಕ್ರವಾರ ಬೆಳಿಗ್ಗೆ ಲಾರಿಯೊಂದು ಕೆಸರಿನಲ್ಲಿ ಹೂತು ಹೋದ ಪರಿಣಾಮ ಮೂರು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯುದ್ದಕ್ಕೂ ಅಗೆದು ಹಾಕಿದ್ದು, ಕೆಲವೆಡೆ ಹೊಂಡ ತೆಗೆಯಲಾಗಿದೆ. ಇದರಿಂದಾಗಿ ಕೆಸರುಮಯ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಅಪಘಾತ ಮತ್ತು ಹೊಂಡಕ್ಕೆ ಬೀಳುವುದರ ಜೊತೆಗೆ ಕೆಸರಿನಲ್ಲಿ ಪ್ರತಿದಿನ ಸಿಲುಕಿಕೊಳ್ಳುತ್ತಿವೆ.

ಸಂಚಾರ ಸುಗಮಗೊಳಿಸಲು ಮೆಲ್ಕಾರ್ ಸಂಚಾರಿ ಠಾಣೆ ಎಸೈ ಮೂರ್ತಿ ಸೇರಿದಂತೆ ಹಲವು ಪೊಲೀಸರು ಪ್ರತಿದಿನ ಹರಸಾಹಸ ಪಡುವಂತಾಗಿದೆ.

ಈ ನಡುವೆ ಗುತ್ತಿಗೆ ವಹಿಸಿಕೊಂಡ ಕೆಎನ್ಆರ್ ಕಂಪನಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದರೂ ನಿರಂತರ ಮಳೆಯಿಂದ ಮಣ್ಣು ಕೊಚ್ಚಿ ಹೋಗಿದೆ. ಇಲ್ಲಿನ ಪಾಣೆಮಂಗಳೂರು ಕಲ್ಲುರ್ಟಿ ಗುಡಿಯಿಂದ ಮೆಲ್ಕಾರ್-ಕಲ್ಲಡ್ಕ ದಾಸರಕೋಡಿ ತನಕ ವಾಹನ ಸಂಚಾರಕ್ಕೆ ಪ್ರತಿದಿನ ಅಡ್ಡಿಯಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT