ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಮುಂಡ್ಕೂರು ಸೇವಾ ಸಂಸ್ಥೆ ಯುವಕರಿಂದ ಸ್ನಾನದ ಗೃಹ, ಶೌಚಾಲಯ ನಿರ್ಮಾಣ

Last Updated 27 ಜುಲೈ 2020, 12:57 IST
ಅಕ್ಷರ ಗಾತ್ರ

ಮೂಡುಬಿದಿರೆ: ಭಾನುವಾರದ ಲಾಕ್‌ಡೌನ್‌ ಅವಧಿಯಲ್ಲಿ ಶ್ರಮದಾನ ಮಾಡುವ ಮೂಲಕ ಇಲ್ಲಿನ ಕಲ್ಲಮುಂಡ್ಕೂರು ಸೇವಾ ಸಂಸ್ಥೆಯ ಯುವಕರು, ಪಾಲಡ್ಕದ ನೆಲ್ಲಕ್ಕೆ ಕಿನ್ನಿಪದವಿನ ಅಶಕ್ತ ಕುಟುಂಬಕ್ಕೆ ಸ್ನಾನದ ಗೃಹ ಮತ್ತು ಶೌಚಾಲಯ ನಿರ್ಮಿಸಿ ನೆರವಾಗಿದ್ದಾರೆ.

ಇಲ್ಲಿನ ಶಾಂತಾ ನಾಯ್ಕ್ ಅವರ ಪತಿ ನಿಧನರಾಗಿದ್ದು, ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಇವರಿಗೆ ಸಣ್ಣ ಮನೆಯಿದ್ದರೂ ಶೌಚಾಲಯ ಮತ್ತು ಸ್ನಾನದಗೃಹ ನಿರ್ಮಿಸಲು ಸಾಧ್ಯವಾಗಿರಲಿಲ್ಲ.

ಇದನ್ನು ಅರಿತ ಮೂಡುಬಿದಿರೆ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್, ಮೂಡುಬಿದಿರೆಯ ಯುವ ಮಿಲನ ತಂಡದ ರೂಪಾ ಬಲ್ಲಾಳ್ ಅವರ ಗಮನಕ್ಕೆ ತಂದಿದ್ದಾರೆ. ಅವರು, ಕಲ್ಲಮುಂಡ್ಕೂರು ಸೇವಾ ಸಂಸ್ಥೆಯ 23 ಸದಸ್ಯರೊಂದಿಗೆ ಸೇರಿಕೊಂಡು ಶ್ರಮದಾನದ ಮೂಲಕ ಶೌಚಾಲಯ ಮತ್ತು ಸ್ನಾನದಗೃಹ ನಿರ್ಮಿಸಿಕೊಟ್ಟರು.

ಮೂಡುಬಿದಿರೆ ರೋಟರಿಯ ಅರುಣ್ ಪ್ರಕಾಶ್ ಶೆಟ್ಟಿ ಕೆಂಪುಕಲ್ಲುಗಳನ್ನು ಉಚಿತವಾಗಿ ನೀಡಿದರು. ಕೇಮಾರಿನ ಸುಕೇಶ್ ಶೆಟ್ಟಿ, ಕರುಣಾಕರ ಸುವರ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT