ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್‌ಗೆ ಐಬಿಎ ತಂತ್ರಜ್ಞಾನ ಪ್ರಶಸ್ತಿ

Last Updated 9 ಡಿಸೆಂಬರ್ 2022, 14:28 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್‌ಗೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ನ (ಐಬಿಎ) 18ನೇ ವಾರ್ಷಿಕ ತಂತ್ರಜ್ಞಾನ ಸಮ್ಮೇಳನ, ಎಕ್ಸ್ಪೋ ಮತ್ತು ಪ್ರಶಸ್ತಿಗಳು–22ರಲ್ಲಿ ‘ಅತ್ಯುತ್ತಮ ತಂತ್ರಜ್ಞಾನ ಸಂಪನ್ನ' (ಬೆಸ್ಟ್ ಟೆಕ್ನಾಲಜಿ ಟಾಲೆಂಟ್ -ರನ್ನರ್ ಅಪ್) ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಪ್ರಶಸ್ತಿಗೆ ಹರ್ಷ ವ್ಯಕ್ತಪಡಿಸಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ ಎಸ್ ಅವರು, ‘ಮುಂಬರುವ ಕಾಲವು ಸಂಪೂರ್ಣ ಡಿಜಿಟಲ್ ವ್ಯವಹಾರಗಳ ದಿನಗಳೇ ಆಗಲಿದ್ದು ಅದಕ್ಕಾಗಿ ಬ್ಯಾಂಕ್ 2017 ರಲ್ಲಿ ‘ಕೆಬಿಎಲ್ ವಿಕಾಸ್’ ಎನ್ನುವ ಪರಿವರ್ತನಾ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಅದರ ಎರಡನೇ ಚರಣವಾದ ‘ಕೆಬಿಎಲ್ ನೆಕ್ಸ್ಟ್‌’ ಎಂಬ ಡಿಜಿಟಲ್ ಯಾತ್ರೆಯನ್ನು 2021 ರಲ್ಲಿ ಆರಂಭಿಸಲಾಯಿತು. ಈ ಉಪಕ್ರಮಗಳ ಮೂಲ ಉದ್ದೇಶ ದ್ವಿತೀಯ ಶತಮಾನಕ್ಕೆ ಕಾಲಿಡುತ್ತಿರುವ ಕರ್ಣಾಟಕ ಬ್ಯಾಂಕನ್ನು ‘ಭವಿಷ್ಯದ ಡಿಜಿಟಲ್ ಬ್ಯಾಂಕ್’ ಆಗಿ ರೂಪಿಸುವುದೇ ಆಗಿದೆ ಎಂದರು.

‘‘ಕೆಬಿಎಲ್ ನೆಕ್ಸ್ಟ್‌’ ಎನ್ನುವ ಡಿಜಿಟಲ್ ಉಪಕ್ರಮದ ಮೂಲಕ ನಾವು ಮಾನವ ಸಂಪನ್ಮೂಲ, ಸೈಬರ್ ಸೆಕ್ಯುರಿಟಿ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇನ್ನಿತರ ಕಾರ್ಯಕ್ಷೇತ್ರಗಳಲ್ಲಿ ಡಿಜಿಟಲ್ ವ್ಯವಹಾರ/ಮಾಧ್ಯಮಗಳ ಮೂಲಕ ಹೆಚ್ಚಿನ ಕ್ಷಮತೆಯನ್ನು ಸಾಧಿಸಲು ಅಣಿಯಾಗಿದ್ದೇವೆ. ತನ್ಮೂಲಕ ಗ್ರಾಹಕರಿಗೆ ಉತ್ತಮ ಡಿಜಿಟಲ್ ಅನುಭೂತಿಯನ್ನು ನೀಡಲು ಬದ್ಧರಾಗಿದ್ದೇವೆ. ನಮ್ಮ ಈ ಹಿಂದಿನ ಹಾಗೂ ಪ್ರಸ್ತುತ ಪ್ರಯತ್ನಗಳು ನಾವೆಣಿಸಿದಂತೆ ಉತ್ತಮ ಫಲ ನೀಡಲು ಪ್ರಾರಂಭಿಸಿವೆ. ಪ್ರತಿಷ್ಠಿತ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ರಾಷ್ಟ್ರಮಟ್ಟದಲ್ಲಿ ನೀಡಿರುವ ಈ ಪ್ರಶಸ್ತಿಯು ನಮ್ಮ ಪರಿವರ್ತನಾ ಪ್ರಕ್ರಿಯೆಯ ಯಶಸ್ಸಿಗೆ ದೊರೆತ ಗೌರವವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT