ಶನಿವಾರ, ನವೆಂಬರ್ 23, 2019
17 °C

ಕನ್ನಡ ಭಾಷೆಯ ರಕ್ಷಣೆಗೆ ಹೋರಾಟ ಅನಿವಾರ್ಯ

Published:
Updated:
Prajavani

ಬದಿಯಡ್ಕ: ‘ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಅನೇಕ ಸೌಲಭ್ಯಗಳಿದ್ದರೂ, ಕೇರಳ ಸರ್ಕಾರ ಅವುಗಳನ್ನು ನೀಡದೆ ಸತಾಯಿಸುತ್ತಿದೆ. ಕನ್ನಡ ಭಾಷೆಯ ರಕ್ಷಣೆಯ ಜತೆಗೆ ಈ ಸವಲತ್ತುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ’ ಎಂದು ಹಿರಿಯ ಕನ್ನಡ ಹೋರಾಟಗಾರ ರಘು ಮೀಪುಗುರಿ ಹೇಳಿದರು

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶುಕ್ರವಾರ ಮೀಪುಗುರಿಯಲ್ಲಿರುವ ಕನ್ನಡಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕಾಸರಗೋಡಿನಲ್ಲಿ ಕನ್ನಡದ ಶಕ್ತಿ ಕುಂದುತ್ತಿದ್ದು, ಕನ್ನಡಿಗ ಯುವಜಜನರು  ಕನ್ನಡ ಕಟ್ಟುವ ಕೆಲಸ ಮಾಡಬೇಕು’ ಎಂದು ಹೇಳಿದರು. 

ಗುರುಪ್ರಸಾದ ಕೋಟೆಕಣಿ, ವಿನೋದ್‌ ಮಾಸ್ತರ್, ಸತ್ಯನಾರಾಯಣ ಕಾಸರಗೋಡು ಇದ್ದರು. ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ಕುಶಲ ವಂದಿಸಿದರು. ದಿವಾಕರ ಅಶೋಕ ನಗರ ಕನ್ನಡ ಪ್ರತಿಜ್ಞೆ ಬೋಧಿಸಿದರು. ನಂತರ ಜಯಾನಂದ ಕುಮಾರ್, ಕೃಪಾನಿಧಿ, ದಿವಾಕರ ಅಶೋಕನಗರ, ಕಾವ್ಯ ಕುಶಲ ಅವರಿಂದ ಕನ್ನಡ ಕಾವ್ಯ ಗಾಯನ ನಡೆಯಿತು. 

 

ಪ್ರತಿಕ್ರಿಯಿಸಿ (+)