ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2030ಕ್ಕೆ ಬಲಿಷ್ಠ ಕೊಂಕಣಿ ಸಮಾಜ’

ಮಣಿಪಾಲ ಗ್ಲೋಬಲ್‌ ಎಜುಕೇಶನ್ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ ಆಶಯ
Last Updated 26 ಆಗಸ್ಟ್ 2019, 6:44 IST
ಅಕ್ಷರ ಗಾತ್ರ

ಮಂಗಳೂರು: ‘ಕೊಂಕಣಿ ಭಾಷಿಕ ಸಮಾಜವು 2030ರ ವೇಳೆಗೆ ವಿಶ್ವದಲ್ಲಿ ಬಲಾಢ್ಯವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು’ ಎಂದು ಮಣಿಪಾಲ ಗ್ಲೋಬಲ್‌ ಎಜ್ಯು ಕೇಶನ್ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ ಆಶಯ ವ್ಯಕ್ತಪಡಿಸಿದರು.

ನಗರದ ಟಿ.ವಿ. ರಮಣ ಪೈ ಹಾಲ್‌ನಲ್ಲಿ ಭಾನುವಾರ ಕೊಂಕಣಿ ಭಾಷಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ (ವಿಕೆಎಸ್‌ಎಸ್‌ಎಫ್)ಯ ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಪಡೆಯುವ ಹಾಗೂ ವಿದೇಶದಲ್ಲಿ ಸಂಶೋಧನೆಯನ್ನು ನಡೆಸಲು ಇಚ್ಛಿಸುವ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಗುರಿಗೆ ಆಧಾರವಾಗಲು ನಾವು ಹತ್ತು ವರ್ಷಗಳ ಹಿಂದೆ ನಿರ್ಧರಿಸಿದ್ದೆವು. ಯಾರೇ ಎಷ್ಟೇ ಶಿಕ್ಷಣ ಪಡೆದರೂ, ನಮ್ಮ ಸಾಂಸ್ಕೃತಿಕ ಬೇರಿನಿಂದ ದೂರ ಸರಿಯಬಾರದು. ನಮ್ಮ ಯುವಜನತೆಗೆ ಉತ್ತಮ ಅವಕಾಶ ಒದಗಿಸುವುದೇ ನಮ್ಮ ಗುರಿ. ಹೀಗಾಗಿ, ಕೊಂಕಣಿ ಮಾತನಾಡುವ ಸಮುದಾಯವೆಲ್ಲ ಭಾಷೆಯ ಮೂಲಕ ಒಂದಾಗಬೇಕು’ ಎಂದು ಹೇಳಿದರು.

ಉದ್ಘಾಟಿಸಿದ ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜ್ಯುಕೇಶನ್ (ಮಾಹೆ) ಟ್ರಸ್ಟಿ ವಸಂತಿ ರಾಮದಾಸ ಪೈ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು’ ಎಂದರು.

₹3.5 ಕೋಟಿ ಮೊತ್ತದ ವಿದ್ಯಾರ್ಥಿ ವೇತನವನ್ನು ಕೊಂಕಣಿ ಸಮುದಾಯದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಿಕೆಎಸ್‌ಎಸ್‌ಎಫ್ಅಧ್ಯಕ್ಷ ರಾಮದಾಸ್ ಕಾಮತ್ ಯು, ಕಾರ್ಯದರ್ಶಿ ಪ್ರದೀಪ್ ಜಿ. ಪೈ, ಶಾಸಕ ವೇದವ್ಯಾಸ ಕಾಮತ್, ವಿಶ್ವಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ, ಕಾರ್ಯದರ್ಶಿ ಶಕುಂತಳಾ ಆರ್. ಕಿಣಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಿರೋಶಾ ಕುಮಾರಿ, ಎಂಟರ್‌ಪ್ರೈಸ್ 5 ಸಿ ಸಿಇಒ ಜಗದೀಶ ಕಿಣಿ, ಜೂಮ್ ಅಬ್ರಾಡ್ ಡಾಟ್ ಕಾಮ್ ಸಿಸಿಒ ಅಭಿಷೇಕ್ ನಖಾತೆ, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾ ಅಧ್ಯಕ್ಷ ಕೆ.ಬಿ. ಖಾರ್ವಿ, ರಾಜ್ಯ ಕುಡುಬಿ ಸಂಘಟನೆ ಅಧ್ಯಕ್ಷ ನಾರಾಯಣ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT