ಮಂಗಳವಾರ, ಜುಲೈ 27, 2021
28 °C

ಕುಕ್ಕೆ: ಅಧಿಕ ಭಕ್ತ ಸಂದಣಿ; 135 ದಾಖಲೆಯ ತುಲಾಭಾರ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಸರಣಿ ರಜೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದರ್ಶನಕ್ಕೆ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಶ್ರೀ ಕ್ಷೇತ್ರದಲ್ಲಿ ದಾಖಲೆಯ 135 ತುಲಾಭಾರ ಸೇವೆ ನೆರವೇರಿದೆ.

ಹಿಂದೆ ಅತೀ ಹೆಚ್ಚು ಎಂದರೆ 122 ಮಂದಿ, 2017ರಲ್ಲಿ 118 ಸೇವೆ ನೆರವೇರಿತ್ತು. ಭಾನುವಾರ ಆಶ್ಲೇಷ ಬಲಿ, ನಾಗಪ್ರತಿಷ್ಠೆ ಶೇಷ ಸೇವೆಗಳಲ್ಲಿ ಕೂಡ ಹೆಚ್ಚಳವಾಗಿದೆ. ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕ ನೆರವೇರಿಸಿದರು.

ಅಕ್ಷರಾ ವಸತಿ ಗೃಹದ ಹಿಂಭಾಗದಲ್ಲಿನ ವಾಹನ ನಿಲುಗಡೆ ಸ್ಥಳ, ಮತ್ತು ಬಿಲದ್ವಾರದ ಬಳಿ,ಸವಾರಿ ಮಂಟಪ ತುಂಬಿ ಹೋಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು