ಎಲ್‌ಐಸಿಯಿಂದ 60 ಲಕ್ಷ ಮಂದಿಗೆ ವಿಮೆ

7
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ದೊರೆತ ಸುರಕ್ಷೆ

ಎಲ್‌ಐಸಿಯಿಂದ 60 ಲಕ್ಷ ಮಂದಿಗೆ ವಿಮೆ

Published:
Updated:
Deccan Herald

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಅವರ ಪತಿ ಅಥವಾ ಪತ್ನಿಗೆ ಭಾರತೀಯ ಜೀವವಿಮಾ ನಿಗಮವು 2018–19ನೇ ಸಾಲಿಗೆ ಗುಂಪು ವಿಮಾ ಯೋಜನೆ ಸೌಲಭ್ಯವನ್ನು ಒದಗಿಸಿದೆ.

ಧರ್ಮಸ್ಥಳದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಯೋಜನೆಯ ಪಾಲಿಸಿ ಬಾಂಡ್‌ಅನ್ನು ನಿಗಮದ ದಕ್ಷಿಣ ಮಧ್ಯ ಕ್ಷೇತ್ರೀಯ ವಲಯ ಪ್ರಬಂಧಕ ಟಿ.ಸಿ. ಸುಶೀಲ್‌ ಕುಮಾರ್‌ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಿದರು.

ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ‘ವಿಮಾ ಯೋಜನೆ ಸಂಘದ ಸದಸ್ಯರ ಆರ್ಥಿಕ ಸೇರ್ಪಡೆಯ ಭಾಗವಾಗಲಿದೆ’ ಎಂದರು.

ಟಿ.ಸಿ.ಸುಶೀಲ್‌ ಕುಮಾರ್ ಮಾತನಾಡಿ, ‘ಈ ವಿಮಾ ಯೋಜನೆಯ ಮೂಲಕ ದುರ್ಭರ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾದ ಆರ್ಥಿಕ ರಕ್ಷಣೆಯನ್ನು ಪಡೆಯಬಹುದು’ ಎಂದು ಹೇಳಿದರು.

ಸುಮಾರು 60 ಲಕ್ಷ ಸದಸ್ಯರಿಗೆ ವಿಮಾ ಸೌಲಭ್ಯ ದೊರೆಯಲಿದ್ದು, ಇದರ ನಿರ್ವಹಣೆಗಾಗಿ ಭಾರತೀಯ ಜೀವವಿಮಾ ನಿಗಮವು ನಗರದಲ್ಲಿ ವಿಶೇಷ ಕಚೇರಿ ತೆರೆಯಲಿದೆ.

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್‌. ಮಂಜುನಾಥ್‌, ಪ್ರಾದೇಶಿಕ ನಿರ್ದೇಶಕ, ಎಂ.ಕೆ.ಅಬ್ರಃಆಂ, ಡಿ. ಜಯರಾಂ, ನಿಗಮದ ಪ್ರಾದೇಶಿಕ ಪ್ರಬಂಧಕ ಜಿ.ಸತ್ಯನಾರಾಯಣ ಶಾಸ್ತ್ರಿ, ಉಡು‍ಪಿ ಹಿರಿಯ ವಿಭಾಗಾಧಿಕಾರಿ ಪಿ.ವಿಶ್ವೇಶ್ವರ ರಾವ್, ವಿಭಾಗಾಧಿಕಾರಿ ವೈ.ಎಸ್‌. ಅಶೋಕ್‌, ಮಾರುಕಟ್ಟೆ ಪ್ರಬಂಧಕ ವೆಂಕಟರಮಣ ಶಿರೂರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !