ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಕೆಪಿಟಿಗೆ ಸ್ವಾಯತ್ತ ಸ್ಥಾನಮಾನದ ಗರಿಮೆ

ರಾಜ್ಯದ 2ನೇ ದೊಡ್ಡ, ಸ್ವಾಯತ್ತೆ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಸರ್ಕಾರಿ ಪಾಲಿಟೆಕ್ನಿಕ್‌ ಹೆಗ್ಗಳಿಕೆ
Published : 24 ಅಕ್ಟೋಬರ್ 2024, 5:31 IST
Last Updated : 24 ಅಕ್ಟೋಬರ್ 2024, 5:31 IST
ಫಾಲೋ ಮಾಡಿ
Comments
ಮಂಗಳೂರಿನ ಕೆಪಿಟಿ ಕಾಲೇಜು

ಮಂಗಳೂರಿನ ಕೆಪಿಟಿ ಕಾಲೇಜು

ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ನಮ್ಮ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆತಿರುವುದರಿಂದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಪರೀಕ್ಷೆ ಮುಂದೂಡುವುದು ವಿಳಂಬ ಕಳವಳ ತಪ್ಪಲಿದೆ. ದಾಖಲಾತಿ ಪ್ರಕ್ರಿಯೆ ಸುಲಭವಾಗಲಿದೆ. ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.
–ಅನುರಾಜ್‌ ದ್ವಿತೀಯ ವರ್ಷದ ವಿದ್ಯಾರ್ಥಿ ಪಾಲಿಮರ್‌ ಟೆಕ್ನಾಲಜಿ ವಿಭಾಗ
ಸಂಸ್ಥೆಯ ವಿಶೇಷತೆ ಸಾಧನೆ
ಮಂಗಳೂರಿನ ಹಳೆಯ ಸಂಸ್ಥೆ ಎಂಬ ಹಿರಿಮೆ ಹೊಂದಿರುವ ಕೆಪಿಟಿಯಲ್ಲಿ ವ್ಯಾಸಂಗ ಮಾಡಲು ಪ್ರತಿ ವರ್ಷ ದಾಖಲಾತಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. 1000ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿವರ್ಷ ದಾಖಲಾಗುತ್ತಾರೆ. ಇಲ್ಲಿನ ಹಳೆ ವಿದ್ಯಾರ್ಥಿಗಳು ದೇಶದ ವಿವಿಧ ಕೈಗಾರಿಕೆಗಳಲ್ಲಿ ಕೆಪಿಟಿಯ ಹಳೆವಿದ್ಯಾರ್ಥಿಗಳು ಮಹತ್ವದ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಎಂಆರ್‌ಪಿಎಲ್‌ ಎನ್‌ಐಟಿಕೆ ಇನ್ಫೋಸಿಸ್‌ ಎಂಸಿಎಫ್‌ ಮುಂತಾದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಮುಖ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಗುರುತಿಸಿಕೊಂಡಿದ್ದು ಕೆಲವರು ಉದ್ಯಮ ನಡೆಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಶೇ 100 ದಾಖಲಾತಿ ಜಾಬ್‌ ಪ್ಲೇಸ್‌ಮೆಂಟ್‌ ಸಂಸ್ಥೆಯ ಮತ್ತೊಂದು ಹೆಗ್ಗಳಿಕೆ. ಪಾಲಿಮರ್‌ ಟೆಕ್ನಾಲಜಿ ಕೋರ್ಸ್‌ ಕೆಪಿಟಿ ಬಿಟ್ಟರೆ ಕರ್ನಾಟಕದ ಬೇರೆ ಯಾವ ಪಾಲಿಟೆಕ್ನಿಕ್‌ಗಳಲ್ಲಿಯೂ ಲಭ್ಯವಿಲ್ಲ. ಸಂಸ್ಥೆಯು 78 ವರ್ಷ ಪೂರೈಸಿದ್ದು ಕೋವಿಡ್–19 ಸಂದರ್ಭದಲ್ಲಿ ಅಮೃತಮಹೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮುಂದಿನ ಜನವರಿಯಲ್ಲಿ ಅಮೃತಮಹೋತ್ಸವ ಆಚರಣೆ ಜರುಗಲಿದೆ. ಹಳೆವಿದ್ಯಾರ್ಥಿಗಳ ಸಂಘವು ₹3 ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಿಸಿ ಕೊಡಲಿದೆ.
‘ಜಾಗತಿಕ ಗುಣಮಟ್ಟಕ್ಕೆ ತಯಾರಿ’
ಕೆಪಿಟಿಗೆ ಸ್ವಾಯತ್ತ ಸ್ಥಾನಮಾನ ದೊರೆತಿರುವುದು ಖುಷಿಯ ವಿಚಾರ. ಇಲ್ಲಿಯವರೆಗೆ ಪರಿಮಿತಿಯ ಪಠ್ಯಕ್ರಮವನ್ನೇ ವಿದ್ಯಾರ್ಥಿಗಳು ಕಲಿಯಬೇಕಾಗಿತ್ತು. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಅವು ಹಳೆಯದಾಗಿದ್ದು ಪ್ರಸ್ತುತ ಕೈಗಾರಿಕಾ ರಂಗ ಬೇಡುವ ಕೌಶಲ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಸ್ವಾಯತ್ತ ಸ್ಥಾನಮಾನ ದೊರೆತಿರುವುದರಿಂದ ಅಗತ್ಯಕ್ಕೆ ತಕ್ಕ ಪಠ್ಯಕ್ರಮ ಸಿದ್ಧಪಡಿಸಬಹುದು. ಜಾಗತಿಕ ಗುಣಮಟ್ಟಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬಹುದು ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಸಿ ಎಲೆಕ್ಟ್ರಿಕಲ್ಸ್ ಲೀಲಾ ಕನ್‌ಸ್ಟ್ರಕ್ಷನ್ಸ್‌ ಮಾಲೀಕ ದೇವಾನಂದ ಎಂ.ಸಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT