ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೇಶ್ವರ| ಗ್ರೈಂಡರ್‌ಗೆ ಶಾಲು ಸಿಲುಕಿ ಜನ್ಮದಿನದಂದೇ ಮಹಿಳೆ ಸಾವು

Last Updated 12 ಫೆಬ್ರವರಿ 2023, 12:54 IST
ಅಕ್ಷರ ಗಾತ್ರ

ಕಾಸರಗೋಡು: ಮಂಜೇಶ್ವರ ಬಳಿಯ ಕುಂಜತ್ತೂರು ತೂಮಿನಾಡಿನಲ್ಲಿ ಮಹಿಳೆಯ ಜನ್ಮದಿನದಂತೆ ಶಾಲು ಗ್ರೈಂಡರ್‌ಗೆ ಸಿಲುಕಿ ಕೊರಳು ಬಿಗಿಯಲ್ಪಟ್ಟು ಮೃತಪಟ್ಟಿದ್ದಾರೆ.

ಲಕ್ಷಂವೀಡು ಕಾಲೊನಿ ನಿವಾಸಿ ರಂಜನ್ ಕುಟ್ಟ ಎಂಬುವರ ಪತ್ನಿ ಜಯಶೀಲಾ (21) ಮೃತರು. ತೂಮಿನಾಡಿನ ಬೇಕರಿಯೊಂದರಲ್ಲಿ ಈ ಘಟನೆ ನಡೆದಿದೆ.

ಬೃಹತ್ ಗ್ರೈಂಡರ್‌ನಲ್ಲಿ ತೆಂಗಿನಕಾಯಿ ಅರೆಯುತ್ತಿದ್ದ ವೇಳೆ ಕೆಳಬದಿಯ ತಿರುಗುವ ಕಬ್ಬಿಣದ ಹಿಡಿಗೆಯಲ್ಲಿ ಅವರು ಧರಿಸಿದ್ದ ಉಡುಪಿನ ಶಾಲು ಸಿಲುಕಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಜಯಶೀಲಾ ಅವರು ವಿಟ್ಲ ನಿವಾಸಿ ಮಹಾಲಿಂಗ- ಸುನಂದಾ ದಂಪತಿ ಪುತ್ರಿ. ಒಂದೂವರೆ ವರ್ಷ ಹಿಂದೆ ಅವರ ವಿವಾಹ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT