ಮಂಗಳವಾರ, ನವೆಂಬರ್ 19, 2019
25 °C
ಪುತ್ತೂರಿನಲ್ಲಿ ‘ಬಲೇ ಬಲಿಪುಗ' 10 ಕಿ.ಮೀ. ಓಟ

ಮ್ಯಾರಥಾನ್: ಹರ್ಷಿತ್ , ದೀಕ್ಷಾ ಪ್ರಥಮ

Published:
Updated:
Prajavani

ಪುತ್ತೂರು: ಇಲ್ಲಿ ಭಾನುವಾರ ಪುತ್ತೂರು ಕ್ಲಬ್ ವತಿಯಿಂದ ಫಿಟ್ ಇಂಡಿಯಾ ಧ್ಯೇಯದಡಿ ನಡೆದ ‘ಬಲೆ ಬಲಿಪುಗ’ ಮ್ಯಾರಥಾನ್ ಓಟದ 10ಕಿ.ಮೀ. ಪುರುಷರ ವಿಭಾಗದಲ್ಲಿ ಹರ್ಷಿತ್ ಬೆಟ್ಟಂಪಾಡಿ ಹಾಗೂ ಮಹಿಳೆಯರ ವಿಭಾಗದಲ್ಲಿ ದೀಕ್ಷಾ ಬಿ. ಬೆಟ್ಟಂಪಾಡಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರಿಬ್ಬರು ಪ್ರಥಮ ಬಹುಮಾನವಾಗಿ 24 ಇಂಚ್‌ನ ಎಲ್ಇಡಿ ಟಿ.ವಿ., ₹2500 ನಗದು, ಪ್ರಮಾಣ ಪತ್ರ ಹಾಗೂ ಟ್ರೋಫಿಯನ್ನು ಪಡೆದಿದ್ದಾರೆ.

ಫಲಿತಾಂಶ: 10 ಕಿ.ಮೀ. ಪುರುಷರ ವಿಭಾಗದ ಮ್ಯಾರಥಾನ್ ಓಟದಲ್ಲಿ  ಸಚಿನ್ ಕೆ.ಎಸ್(ದ್ವಿತೀಯ), ನಿಶಾಂತ್ (ತೃತೀಯ), ಪುರುಷೋತ್ತಮ್ (ಚತುರ್ಥ) ಹಾಗೂ ಜಿತೇಶ್ ಎಸ್. (ಪಂಚಮ) ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ರೇಷ್ಮಾ (ದ್ವಿತೀಯ) ಹರ್ಷಿತಾ ಎ.( ತೃತೀಯ), ಸಂಧ್ಯಾ ಕೆ.ಎಸ್. (ಚತುರ್ಥ) ಹಾಗೂ ಬಿ.ಎಲ್.ಮಂಜುಳಾ (ಪಂಚಮ) ಸ್ಥಾನ ಪಡೆದಿದ್ದಾರೆ.

5 ಕಿ.ಮೀ. ಪುರುಷರ ವಿಭಾಗದಲ್ಲಿ ಕಾರ್ತಿಕ್ ಪಿ. (ಪ್ರಥಮ) ನವೀನ್ ಡಿ. (ದ್ವಿತೀಯ), ದೀಕ್ಷಿತ್ ಎಂ. (ತೃತೀಯ), ಭುವನೇಶ್ ಎಸ್. (ಚತುರ್ಥ) ಹಾಗೂ ಹರ್ಷಿತ್ (ಪಂಚಮ) ಸ್ಥಾನ ಪಡೆದಿದ್ದು, ಮಹಿಳೆಯರ ವಿಭಾಗದಲ್ಲಿ ಪ್ರಜ್ಞಾ ಎನ್. (ಪ್ರಥಮ) ಮಂಜುಶ್ರೀ (ದ್ವಿತೀಯ) ಜಯಶ್ರೀ (ತೃತೀಯ) ಅನ್ವಿತಾ (ಚತುರ್ಥ) ಹಾಗೂ ಅಶ್ವಿನಿ (ಪಂಚಮ) ಸ್ಥಾನ ಪಡೆದುಕೊಂಡರು.

ಬಾಲಕರ ವಿಭಾಗದ 1ಕಿ.ಮೀ. ಸ್ಪರ್ಧೆಯಲ್ಲಿ ರಂಜಿತ್ (ಪ್ರಥಮ) ಕಿರಣ್ (ದ್ವಿತೀಯ) ನಂದನ್ (ತೃತೀಯ) ಹಾಗೂ ಬಾಲಕಿಯರ ವಿಭಾಗದಲ್ಲಿ ಶಿವಾನಿ (ಪ್ರಥಮ) ತೃಷಾ ಐ. (ದ್ವಿತೀಯ) ಹಾಗೂ ಕೃತಿ ಕೆ. (ತೃತೀಯ) ಸ್ಥಾನ ಪಡೆದುಕೊಂಡರು.

5 ಕಿ.ಮೀ. ವಿಭಾಗದಲ್ಲಿ ದಿವ್ಯಶ್ರೀ, ರಂಜಿತಾ, ಜಗದೀಶ್ ಸುಳ್ಯ ಹಾಗೂ ಸುಲೋಚನಾ ವಿಶೇಷ ಬಹುಮಾನ ಪಡೆದುಕೊಂಡರು. ಎಲ್ಲಾ ವಿಭಾಗದಲ್ಲೂ ವಿಜೇತರಾದವರಿಗೆ ಪ್ರಶಸ್ತಿಹಾಗೂ ಗಿಫ್ಟ್‌ ಕೂಪನ್ ಬಹುಮಾನ ನೀಡಲಾಯಿತು.

ಪುತ್ತೂರಿನ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಅವರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು. ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ,ನಗರಸಭಾ ಸದಸ್ಯೆ ವಿದ್ಯಾ ಗೌರಿ, ದಿ.ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ಇದ್ದರು.

ಪ್ರತಿಕ್ರಿಯಿಸಿ (+)