ಮಂಗಳೂರು: ಅಸ್ತ್ರ ಪ್ರೊಡಕ್ಷ ನ್ ಬ್ಯಾನರ್ನಡಿ ನಿರ್ಮಿಸಿರುವ ‘ಮೀರಾ’ ತುಳು ಸಿನಿಮಾ ಇದೇ 11ರಂದು ಬಿಡುಗಡೆಯಾಗಲಿದೆ ಎಂದು ನಟ ಸ್ವರಾಜ್ ಶೆಟ್ಟಿ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ತುಳು ಚಿತ್ರರಂಗದ ಮಹಿಳಾ ಪ್ರಧಾನ ಸಿನಿಮಾಗಳಿಲ್ಲ ಎಂಬ ಕೊರತೆಯನ್ನು ನೀಗಿಸುವ ಗಟ್ಟಿ ಕಥಾನಕವನ್ನು ಹೊಂದಿರುವ ಸಿನಿಮಾ ಇದು. ಹೆಣ್ಣಿನ ಕನಸು, ನೋವು ನಲಿವುಗಳನ್ನು ಆಧರಿಸಿದ ಈ ಸಿನಿಮಾದಲ್ಲಿ ಹಾಸ್ಯವನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಲಾಗಿದೆ. ಅಶ್ವಥ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಸಿನಿಮಾವನ್ನು ನಿರ್ದೇಶಿಸಿದ್ದಾರೆ’ ಎಂದರು.

‘ಇಶಿತಾ ಶೆಟ್ಟಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್. ಮೊದಲಾದ ಕಲಾವಿದರು ನಟಿಸಿದ್ದಾರೆ. ಮುಂಬೈ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಪಾತ್ರ ನಿರ್ವಹಿಸಿದ್ದಾರೆ’ ಎಂದರು.

‘ಈ ಚಿತ್ರದಲ್ಲಿ 5 ಹಾಡುಗಳಿವೆ. ಮಧುಬಾಲಕೃಷ್ಣ ಸೇರಿದಂತೆ ಹೆಸರಾಂತ ಗಾಯಕರು ಹಾಡಿದ್ದಾರೆ. ಸಂಕಲನವನ್ನು ಜಾಬಿನ್ಸ್ ಸೆಬಾಸ್ಟಿಯನ್ ನಿರ್ವಹಿಸಿದ್ದಾರೆ. ರಜ್ಜು ಜಯ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಜಯಪ್ರಕಾಶ್ ಕಳೇರಿ ಹಾಡುಗಳನ್ನು ರಚಿಸಿದ್ದಾರೆ‘ ಎಂದರು.

‘ಅಸ್ತ್ರ ಪೊಡ್ರಕ್ಷನ್ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ರಜಿನಿ ಶೆಟ್ಟಿ ಅವರಿಗೆ ₹ 1ಲಕ್ಷ ದೇಣಿಗೆ ನೀಡಿದ್ದೇವೆ. ಬಿಸಿಲು ಮಳೆಯನ್ನು ಲೆಕ್ಕಿಸದೇ ಕಾರ್ಯನಿರ್ವಹಿಸುವ ನಗರದ 300 ಸಂಚಾರ ಪೊಲೀಸ್ ಸಿಬ್ಬಂದಿಗೆ ಕೊಡೆಗಳನ್ನು ವಿತರಿಸಿದ್ದೇವೆ’ ಎಂದರು.

‘ತುಳು ಚಿತ್ರರಂಗವು ಸೀಮಿತ ಮಾರುಕಟ್ಟೆ ಹೊಂದಿದೆ ಎಂಬ ಮಾತನ್ನು ಮೀರಿ ಈ ಸಿನೆಮಾ ವ್ಯಾಪಕವಾಗಿ ಯಶಸ್ಸು ಗಳಿಸುವ ವಿಶ್ವಾಸವಿದೆ. ತುಳುವಿನಲ್ಲೂ ಉನ್ನತ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸುತ್ತಿದ್ದೇವೆ. ಈ ಚಿತ್ರರಂಗದ ಕುರಿತ ಅಭಿಪ್ರಾಯ ಬದಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಅಶ್ವತ್ಥ್, ನಟಿ ಇಶಿತಾ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.