ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು– ಮತೀಯ ಗೂಂಡಾಗಿರಿ; ಬಜರಂಗದಳದ ಮೂವರ ಗಡಿಪಾರಿಗೆ ಕ್ರಮ

Published 21 ಜುಲೈ 2023, 20:00 IST
Last Updated 21 ಜುಲೈ 2023, 20:00 IST
ಅಕ್ಷರ ಗಾತ್ರ

ಮಂಗಳೂರು: ಮತೀಯ ಗೂಂಡಾಗಿರಿಯಲ್ಲಿ ತೊಡಗಿದ ಆರೋಪದ ಮೇರೆಗೆ ಬಜರಂಗದಳದ ಮೂವರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಮಂಗಳೂರು ನಗರ ಪೊಲೀಸರು ಆರಂಭಿಸಿದ್ದಾರೆ.

‘ನಮ್ಮ ಕಾರ್ಯಕರ್ತರಾದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಎಂಬುವವರಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಇವರ ಮೇಲೆ ಯಾವುದೇ ಕೊಲೆ ಅಥವಾ ಕೊಲೆಯತ್ನ ಪ್ರಕರಣಗಳು ಇಲ್ಲ. ಪೊಲೀಸರು ಕೋಮುದ್ವೇಷ ನಿಗ್ರಹ ಘಟಕದ ಕಾರ್ಯಚಟುವಟಿಕೆ ತೋರಿಸಲು ನಮ್ಮ ಕಾರ್ಯಕರ್ತರನ್ನು ಗುರಿ ಮಾಡುತ್ತಿದ್ದಾರೆ. ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡುವ ಮೂಲಕ ಹಿಂದುತ್ವದ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್ ಜೈನ್, ‘ಮತೀಯ ಗೂಂಡಾಗಿರಿಯಲ್ಲಿ ಪದೇ ಪದೇ ಭಾಗಿಯಾಗುವ ಆರೋಪಿಗಳ ವಿರುದ್ಧ ರೌಡಿ ಪಟ್ಟಿ ತೆರೆದು ಕ್ರಮ ಜರುಗಿಸಲಾಗುತ್ತಿದೆ. ಅವರು ಯಾವ ಸಂಘಟನೆಗೆ ಸೇರಿದವರು ಎಂಬುದು ಮುಖ್ಯವಲ್ಲ. ನಮಗೆ ಅವರು ಆರೋಪಿಗಳು ಮಾತ್ರ. ಒಂದು ವರ್ಷದಲ್ಲಿ ಇಂತಹ 62 ರೌಡಿಗಳ ಗಡಿಪಾರಿಗೆ ಕ್ರಮವಹಿಸಲಾಗಿದೆ. ಈ ಮೂವರ ಮೇಲೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸಂಬಂಧಿಸಿದ ಠಾಣೆಯಿಂದ ಗಡಿಪಾರಿಗೆ ಪ್ರಸ್ತಾವ ಬಂದ ಹಿನ್ನೆಲೆಯಲ್ಲಿ ಪೂರಕ ಕ್ರಮ ವಹಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT