‘ಮುದ್ದಣ ಕಾವ್ಯ ಪ್ರಶಸ್ತಿ’ಗೆ ಹಸ್ತಪ್ರತಿಗಳ ಆಹ್ವಾನ

ಮಂಗಳವಾರ, ಜೂಲೈ 16, 2019
26 °C

‘ಮುದ್ದಣ ಕಾವ್ಯ ಪ್ರಶಸ್ತಿ’ಗೆ ಹಸ್ತಪ್ರತಿಗಳ ಆಹ್ವಾನ

Published:
Updated:

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘವು–2019ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಗಾಗಿ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.

ಪ್ರಶಸ್ತಿಗೆ ಆಯ್ಕೆಯಾದ ಕವನ ಸಂಗ್ರಹಕ್ಕೆ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧೆಯ ವಿವರಗಳನ್ನು ಪಡೆಯಲು ಆಸಕ್ತರು ₹5 ಮುಖಬೆಲೆಯ ಅಂಚೆ ಚೀಟಿ ಹಚ್ಚಿದ ಸ್ವವಿಳಾಸ ಇರುವ ಕವರನ್ನು ಪ್ರಧಾನ ಕಾರ್ಯದರ್ಶಿ, ಕಾಂತಾವರ ಕನ್ನಡ ಸಂಘ (ರಿ), ಅಂಚೆ: ಕಾಂತಾವರ - 574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ ಇವರಿಗೆ ಕಳುಹಿಸಿಕೊಡಬೇಕು.

ಹಸ್ತಪ್ರತಿ ಸ್ವೀಕಾರದ ಕೊನೆಯ ದಿನ ಆಗಸ್ಟ್‌ 30. ಮಾಹಿತಿಗೆ ಸದಾನಂದ ನಾರಾವಿ (ಮೊಬೈಲ್ 90089 78366) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !