ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಜೀವನಾಡಿ ಸಸಿಹಿತ್ಲು ಬೀಚ್ ರಕ್ಷಣೆ

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ
Last Updated 28 ಜೂನ್ 2019, 14:10 IST
ಅಕ್ಷರ ಗಾತ್ರ

ಮೂಲ್ಕಿ:‌ ‘ಕರಾವಳಿಯ ಜೀವನಾಡಿಯಾಗಿರುವ ಸರ್ಫಿಂಗ್‌ ಮೂಲಕ ಅಂತರರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಸಸಿಹಿತ್ಲು ಬೀಚ್‌ ಉಳಿಸಬೇಕಾದರೆ, ಇಲ್ಲಿನ ಜಮೀನನ್ನು ಉಳಿಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕಾಗಿದೆ’ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ಮೂಲ್ಕಿ ಬಳಿಯ ಹಳೆಯಂಗಡಿ ಗ್ರಾಮ ಪಂಚಾಯಿತಿಯ ಸಸಿಹಿತ್ಲುವಿನ ಬೀಚ್‌ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡದೊಂದಿಗೆ ಶುಕ್ರವಾರ ವಿಶೇಷ ಭೇಟಿ ನೀಡಿದಅವರು, ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೀಚ್‌ ಜಮೀನಿನ ಅರ್ಧ ಭಾಗವೇ ಸಮುದ್ರ ಸೇರುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಧಿಕಾರಿಗಳನ್ನೇ ಸ್ಥಳಕ್ಕೆ ಕರೆಯಿಸಿದ್ದೇನೆ. ಜಮೀನೇ ಇಲ್ಲದಿದ್ದಲ್ಲಿ ಬೀಚ್ ಇರುವುದಾದರೂ ಹೇಗೆ? ಪ್ರವಾಸೋದ್ಯಮದಿಂದ ₹45 ಕೋಟಿ ವೆಚ್ಚದ ಅಭಿವೃದ್ಧಿಗೆ ನೀಲನಕ್ಷೆಯನ್ನು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಳಿವೆ ಪ್ರದೇಶದಲ್ಲಿ ನದಿ ಕೊರೆತ ತಡೆಯಲು ₹1.5 ಕೋಟಿ ಮೊತ್ತವನ್ನು ಬಜೆಟ್‌ನಲ್ಲಿ ಮಂಜೂರು ಮಾಡಿಸಿ, ಶಾಶ್ವತ ತಡೆಗೋಡೆಯ ನಿರ್ಮಾಣಕ್ಕೆ ಇಂದೇ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸುತ್ತೇನೆ’ ಎಂದರು.

‘ಹಳೆಯಂಗಡಿ ಗ್ರಾಮ ಪಂಚಾಯಿತಿಯು ಬೀಚ್‌ನ ಅಭಿವೃದ್ಧಿಗಾಗಿ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ನಿರ್ಮಿಸಿದ ಮೂರು ಅಂಗಡಿ ಕೋಣೆಯಲ್ಲಿ ಒಂದು ನದಿ ಪಾಲಾಗಿದ್ದು, ಇದಕ್ಕೂ ಸಹ ಪ್ರಕೃತಿ ವಿಕೋಪದ ನಿಧಿಯಿಂದ ಧನ ಸಹಾಯವನ್ನು ನೀಡಲಾಗುವುದು. ಎಲ್ಲಾ ಇಲಾಖೆಗಳೊಂದಿಗೆ ಪಂಚಾಯಿತಿಯು ಸಂವಹನ ನಡೆಸಲು ಸೂಚನೆ ನೀಡಲಾಗುವುದು ಹಾಗೂ ರಾಜ್ಯದ ಪ್ರವಾಸೋದ್ಯಮ ಮತ್ತು ಸಣ್ಣ ನೀರಾವರಿ ಖಾತೆಯ ಸಚಿವರನ್ನು ಸಸಿಹಿತ್ಲಿಗೆ ಕರೆತಂದು ಇಲ್ಲಿನ ಪರಿಸ್ಥಿತಿಯನ್ನು ಮನದಟ್ಟು ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಹಳೆಯಂಗಡಿ ಗ್ರಾಮ ಪಂಚಾಯಿತಿಯ ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್.ವಸಂತ ಬೆರ್ನಾಡ್, ಉಪಾಧ್ಯಕ್ಷ ಅನಿಲ್‌ಕುಮಾರ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಮಟ್ಟು, ಪ್ರಧಾನ ಕಾರ್ಯದರ್ಶಿ ಬಿ.ಎಂ.ಆಸೀಫ್, ಜನಪ್ರತಿನಿಧಿಯಾದ ಜಲಜಾ, ಪದ್ಮಾವತಿ ಶೆಟ್ಟಿ, ಅಝೀಜ್, ಚಂದ್ರಕುಮಾರ್, ಹಮೀದ್, ಖಾದರ್, ಬಶೀರ್, ಫಿಲೋಮಿನಾ, ಸುಜಾತಾ, ಚಂದ್ರಶೇಖರ್, ಜೋಯೆಲ್ ಡಿಸೋಜಾ, ಯೋಗೀಶ್ ಕೋಟ್ಯಾನ್, ಬಾಲಚಂದ್ರ, ಸಮೀರ್, ಆಶೋಕ್, ರಿತೇಶ್, ಸಾಲ್ಯಾನ್, ಪ್ರಕಾಶ್ ಆಚಾರ್ಯ, ಸಾಹುಲ್, ಧನರಾಜ್, ಅಧಿಕಾರಿಗಳಾದ ತಹಶೀಲ್ದಾರ್ ಮಾಣಿಕ್ಯ, ದಿಲೀಪ್ ರೋಡ್ಕರ್, ಮೋಹನ್, ನವೀನ್, ಎಂಜಿನಿಯರ್‌ ಗಳಾದ ಕೃಷ್ಣ ಕುಮಾರ್, ರಾಕೇಶ್, ದಯಾನಂದ, ಉದಯ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT