ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್: ಆಳ್ವಾಸ್‌ನ 181 ವಿದ್ಯಾರ್ಥಿಗಳಿಗೆ 600ಕ್ಕಿಂತ ಹೆಚ್ಚು ಅಂಕ

Published 5 ಜೂನ್ 2024, 23:49 IST
Last Updated 5 ಜೂನ್ 2024, 23:49 IST
ಅಕ್ಷರ ಗಾತ್ರ

ಮೂಡುಬಿದಿರೆ (ದಕ್ಷಿಣ ಕನ್ನಡ): ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ಇಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನ 181 ವಿದ್ಯಾರ್ಥಿಗಳು 600ಕ್ಕೂ ಹೆಚ್ಚಿನ ಅಂಕ ಪಡೆದಿದ್ದು, ಕಾಲೇಜು ಸಾರ್ವಕಾಲಿಕ ಸಾಧನೆ ಮಾಡಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಅಳ್ವ,  11 ವಿದ್ಯಾರ್ಥಿಗಳು 670ಕ್ಕೂ ಹೆಚ್ಚು ಅಂಕ, 51 ವಿದ್ಯಾರ್ಥಿಗಳು  650ಕ್ಕೂ ಹೆಚ್ಚು ಹಾಗೂ 181 ವಿದ್ಯಾರ್ಥಿಗಳು 600ಕ್ಕೂ ಹೆಚ್ಚಿನ ಅಂಕ ಗಳಿಸಿದ್ದಾರೆ. 371 ವಿದ್ಯಾರ್ಥಿಗಳು 550ಕ್ಕೂ ಹೆಚ್ಚು ಹಾಗೂ 686 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದರು.

ಆಕಾಶ್ ಬಸವರಾಜ ಪರಿಶಿಷ್ಟ ಪಂಗಡ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 55ನೇ ರ್‍ಯಾಂಕ್‌ ಪಡೆದರೆ, ಪ್ರೀತಂ ಎಂ 691, ಸದಾನಂದಗೌಡ ಕುಲಕರ್ಣಿ 676, ಗೌಸ್‌ ಇ. ಅಝಾಮ್‌ 673, ಶುಭಾ ವೈ.ಬಿ. 673, ವಿವೇಕ್ ಎಸ್‌.ಬಿ. 671, ತರುಣ್ ಜಿ.ಎನ್. 671, ಮೊಹಮ್ಮದ್ ಒವೈಎಸ್‌ ನಿಸಾರ್ ಖಾನ್ 671, ಆಕಾಶ್ ಬಸವರಾಜ 670, ನಮಿತ್ ಎ.ಪಿ 670, ನಂದೀಷ್ ಆರ್.ಎಸ್. 670, ದರ್ಶನ್ ಎಚ್.ಇ. 670, ತೇಜಸ್ ಗೌಡ ಎಂ. 667, ಮಲಪ್ಪ ಮೇಟಿ 667, ಅಭಿಷೇಕ್ ಗೌಡ ಜೆ. 666, ಮಲ್ಲಿಕಾರ್ಜುನ ಕೆ.ಜೆ 666, ದರ್ಶನ ಕುಮಾರ್ ತಳ್ಳೊಳ್ಳಿ 665, ಆಕರ್ಷ ಪಿ.ಎಸ್  665, ತನು ಮಹೇಶ್ ಎಚ್. 665, ರಕ್ಷನ್ ಡಿ. ಶೇಖಾ 665, ಪ್ರಜುಷಾ ಮಹಾವೀರ 665, ಧುವನ್ ಗೌಡ 665, ಸಂತೋಷ ಬಿ.ಎಂ 665, ವಿಶ್ವಾಸ್ ಬಿ. ಗೌಡ 664, ಸ್ವಾತಿ 663, ರೋಹಿತ್ ಸಿ. 660, ವಾಣಿ ಕೃಷ್ಣ ಜಿ. 660, ಯೋಗಾನಂದ ರಾವ್ ಎನ್. 660, ಶಶಾಂಕ್ ಬಿ.ಕೆ. 660, ಆಕಾಶ್ ಬಸಲಿಂಗಪ್ಪ ಎಚ್. 657, ಸಿಂಚನಾ ಎಚ್‌.ಸಿ. 657, ನಿಧಿ ಉಮೇಶ್ 657, ಬಸವರಾಜ ಅಥಣಿ 657, ದೀತ್ಯಾ ಪಿ. 656, ನವೀನ್ ಬಿ 655, ಉಜ್ವಲ್ ಬಸವರಾಜ ಬಿ. 655, ಆದರ್ಶ 655, ಆದಿತ್ಯಾ 655, ಮಲ್ಲಿಕಾರ್ಜುನ 652, ರಿಷಿ ಶೆಟ್ಟಿ 652, ಚಿರಾಗ್ ಬಿ.ಎಂ 652, ಹೇಮಂತ್ ಕುಮಾರ್ 651, ಟಿ. ನಾಗರಾಜ್ 651, ಯಶ್ವಂತ್ ಡಿ.ಆರ್ 651, ಅವನೀತಾ ಚೇತನಾ 651, ಸುಯೋಗ್ ಎಸ್. 651, ಜನ್‌ಸ್ಟನ್‌ ಸೀಕ್ವೇರಾ 651, ಸುಪ್ರೀತಾ 650, ಯಶ್ವಂತ್ ಕುಮಾರ್ 650, ರಮೇಶ್ ರಾಜ್ ಪುರೋಹಿತ್ 650, ಮನು ಸಿ.ಎಚ್ 650, ಸಂಜಯ್ 650 ಅಂಕಗಳನ್ನು ಪಡೆದಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿಭಾಗದಲ್ಲಿ ಒಟ್ಟು 10 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಅಂಗವಿಕಲರ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಆಳ್ವಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT