ಮಂಗಳೂರು: ಕಾರ್ಮಿಕರು, ಬಡವರು, ರೈತರ ಪರವಾಗಿದ್ದ ಜನಪರವಾದಿ, ಸಂಘಟಕ ನಿರಂಜನ ಸಮಾಜದಲ್ಲಿ ಮಾನವತಾ ಮೌಲ್ಯ ಬಿತ್ತಿದ್ದರು. ಬಂಡವಾಳ ಶಾಹಿಯ ಬೇರು ಬಗೆಬಗೆಯಲ್ಲಿ ಗಟ್ಟಿಗೊಳ್ಳುತ್ತಿರುವ ಇಂದು ವೈಚಾರಿಕ ಪ್ರಜ್ಞೆಯ ವಿಸ್ತಾರಕ್ಕೆ ನಿರಂಜನರ ಸಾಹಿತ್ಯ ಚಿಂತನೆ ಅಗತ್ಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿವಿ ಎಸ್ವಿಪಿ ಕನ್ನಡ ಅಧ್ಯಯನ ಆಯೋಜಸಿದ್ದ ಸಾಹಿತಿ ನಿರಂಜನರ ಕುರಿತು ಶುಕ್ರವಾರ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪ ಗೌಡ ಮಾತನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ ಮನು ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಸಂಯೋಜಕ ಚಂದ್ರಶೇಖರ ರಾಜು ಟಿ.ಎಸ್ ಪಾಲ್ಗೊಂಡಿದ್ದರು. ಸಾಹಿತ್ಯ ಅಕಾಡೆಮಿ ಸಲಹಾ ಮಂಡಳಿ ಸದಸ್ಯ ಚಿದಾನಂದ ಸಾಲಿ ಆಶಯ ಭಾಷಣ ಮಾಡಿದರು. ಪ್ರೊ.ಸೋಮಣ್ಣ ಹೊಂಗಳ್ಳಿ ವಂದಿಸಿದರು. ಯಶುಕುಮಾರ್ ನಿರೂಪಿಸಿದರು. ಜಿ.ಎನ್ ಮೋಹನ್, ಧನಂಜಯ ಕುಂಬ್ಳೆ, ಸಿದ್ದನಗೌಡ ಪಾಟೀಲ, ಚೇತನ ಸೋಮೇಶ್ವರ, ಕಾತ್ಯಾಯಿನಿ ಕುಂಜಿಬೆಟ್ಟು ಪ್ರಬಂಧ ಮಂಡಿಸಿದರು.

ಕರ್ನಾಟಕ ಸರ್ಕಾರ ಸಾಹಿತಿ ನಿರಂಜನ ಅವರ ಹೆಸರಲ್ಲಿ ಟ್ರಸ್ಟ್ ರಚಿಸಲು ಮುಂದಾಗಬೇಕು. ಅವರ ಸಮಗ್ರ ಸಾಹಿತ್ಯವನ್ನು ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಲು ಮುಂದಾಗಬೇಕು.

–ಮನು ಬಳಿಗಾರ್ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.