ಪುಚ್ಚೆಮೊಗರಿನ ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಬೇಸಿಗೆಯಲ್ಲಿ ಫಲ್ಗುಣಿ ನದಿಯ ಒಡಲು ಸಂಪೂರ್ಣ ಬತ್ತಿ ಹೋಗಿದ್ದು, ಮತ್ತು ಪಟ್ಟಣಕ್ಕೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, 20 ವರ್ಷಗಳಲ್ಲಿ ಇದೇ ಮೊದಲು ಎಂದು ಪಂಪ್ ಆಪರೇಟರ್ ಪದ್ಮರಾಜ್ ಜೈನ್ ಹೇಳಿದರು. ಒಂದು ತಿಂಗಳಿಂದ ನದಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡು, ಪರ್ಯಾಯವಾಗಿ ಕೊಳವೆಬಾವಿಯಿಂದ ಒಟ್ಟು ಮೂರು ಟ್ಯಾಂಕರ್‌ಗಳಲ್ಲಿ ನಿತ್ಯ ಒಂದು ಲಕ್ಷ ಲೀಟರ್‌ನಷ್ಟು ನೀರನ್ನು ಪುರಸಭೆ ಪೂರೈಕೆ ಮಾಡುತಿತ್ತು.