ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಜಿಲ್ಲಾ ಸಮಾವೇಶ 21ರಂದು

Last Updated 17 ಸೆಪ್ಟೆಂಬರ್ 2022, 14:50 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರ ಮತ್ತು ನಾಲ್ಕನೇ ದರ್ಜೆ ನೌಕರರ ಸಂಘ ಏರ್ಪಡಿಸಿರುವ ಖಾಯಂ, ಗುತ್ತಿಗೆ ಪೌರಕಾರ್ಮಿಕರ, ವಾಹನ ಚಾಲಕರ, ಲೋಡರ್‌ಗಳ ಮತ್ತು ಯುಜಿಡಿ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶ ಇದೇ 21ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಪೌರಕಾರ್ಮಿಕರ ಮಹಾಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಅವರು ಬೆಳಿಗ್ಗೆ 10 ಗಂಟೆಗೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್‌.ಪಿ ಆನಂದ, ರಾಜ್ಯ ಘಟಕದ ಸಂಘಟನಾ ಸಂಚಾಲಕ ಓಬಳೇಶ, ಮುಖಂಡ ಯತಿರಾಜ್ ಮೈಸೂರು, ಸಾಮಾಜಿಕ ಚಿಂತಕ ಎಂ.ಜಿ ಹೆಗ್ಡೆ, ಪಾಲಿಕೆ ಸದಸ್ಯ ಶಶಿಧರ ಹೆಗ್ಡೆ, ಮುಖಂಡ ಜನಾರ್ದನ ಚೆಂಡ್ತಿಮಾರ್ ಮುಂತಾದವರು ಭಾಗವಹಿಸುವರು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 3.30ಕ್ಕೆ ಸಮಾವೇಶವನ್ನು ನಾರಾಯಣ ಅವರು ಉದ್ಘಾಟಿಸಲಿದ್ದು ಮೇಯರ್ ಜಯಾನಂದ ಅಂಚನ್‌, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಹೇಮಲತಾ ರಘು ಸಾಲ್ಯಾನ್, ನವೀನ್ ಡಿಸೋಜಾ, ನಿವೃತ್ತ ಜಿಲ್ಲಾಧಿಕಾರಿಗಳಾದ ಎ.ಬಿ.ಇಬ್ರಾಹಿಂ, ಶಶಿಕಾಂತ ಸೆಂಥಿಲ್‌, ಸಿಇಡಿಎಸ್‌ಇ ನಿರ್ದೇಶಕಿ ರೀಟಾ ನೊರೊನ್ಹಾ, ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ಕಾಂತಪ್ಪ ಅಲಂಗಾರು ಮತ್ತಿತರರು ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ 1200 ಪೌರಕಾರ್ಮಿಕರು ಇದ್ದು 317 ಮಂದಿಯನ್ನು ಮಾತ್ರ ಖಾಯಂ ಮಾಡಲಾಗಿದೆ. ಎಲ್ಲರನ್ನೂ ನೇರ ನೇಮಕಾತಿಯಡಿಗೆ ತರಬೇಕು ಎಂಬುದು ಸಮಾವೇಶದ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಎಸ್‌.ಪಿ.ಆನಂದ, ಲಕ್ಷ್ಮಣ್‌, ಸುರೇಶ್ ಉರ್ವ, ಸಂಜೀವ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT