ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಲಿಕುಳ: ಫುಲ್ ಡೋಮ್ ಚಿತ್ರೋತ್ಸವ ಉದ್ಘಾಟನೆ

ಮೂರು ದಿನದ ವಿಜ್ಞಾನ ಸಮ್ಮೇಳನ ; ವಿಜ್ಞಾನ ಪ್ರದರ್ಶನ
Last Updated 6 ನವೆಂಬರ್ 2019, 13:48 IST
ಅಕ್ಷರ ಗಾತ್ರ

ಬಜ್ಪೆ: ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಪಿಲಿಕುಳ ವಿಜ್ಞಾನ ತಂತ್ರಜ್ಞಾನ ಸೊಸೈಟಿ(ಕೆಸ್ಟೆಪ್ಸ್) ಆಶ್ರಯದಲ್ಲಿ ಬುಧವಾರ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಫುಲ್ ಡೋಮ್ ಚಿತ್ರೋತ್ಸವ ಹಾಗೂ ತಾರಾಲಯ ಸಮ್ಮೇಳನ ಆರಂಭಗೊಂಡಿತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ(ಇಸ್ರೊ) ನಿವೃತ್ತ ಅಧ್ಯಕ್ಷ ಎ. ಎಸ್. ಕಿರಣ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಹೊನ್ನೇಗೌಡ ಮಾತನಾಡಿ, ‘ಇಲ್ಲಿಯ 18 ಮೀಟರ್ ಗೋಪುರ (ಡೋಮ್) ತಾರಾಲಯ ವಿಶ್ವ ಪ್ರಸಿದ್ಧಿ ಹೊಂದಿದೆ. ಈಗ ಮೈಸೂರು, ಬಾಗಲಕೋಟೆಯಲ್ಲಿ 10 ಮೀಟರ್ ಡೋಮ್ ತಾರಾಲಯ ನಿರ್ಮಾಣಕ್ಕೆ ಪ್ರಸ್ತಾವಿಸಲಾಗಿದೆ. ರಾಯಚೂರು, ಗದಗ, ಧಾರವಾಡ ಮುಂತಾದೆಡೆ ತಾರಾಲಯಗಳು ನಿರ್ಮಾಣ ಹಂತದಲ್ಲಿವೆ’ ಎಂದರು.

ಅಮೆರಿಕದ ಅಡ್ಲರ್ ತಾರಾಲಯದ ನಿರ್ದೇಶಕ ಮಾರ್ಕ್ ಸುಬ್ಬರಾವ್, ಮುಂಬೈಯ ಇನ್ಫೋವಿಷನ್ ಟೆಕ್ನಾಲಾಜೀಸ್‌ನ ಅಭಿಜಿತ್ ಶೇಟ್ಯೆ, ಇವಾನ್ಸ್ ಆ್ಯಂಡ್ ಸದರ್‌ಲ್ಯಾಂಡ್ ನಿರ್ದೇಶಕ ಎ. ನಿಸ್ಕಾಚ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧ್ಯಕ್ಷತೆ ವಹಿಸಿದ್ದರು. ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ ವಿ ರಾವ್ ಸ್ವಾಗತಿಸಿದರು.

ಸಮ್ಮೇಳನ: ತಾರಾಲಯದಲ್ಲಿ ಮೂರು ದಿನಗಳ ವಿಜ್ಞಾನ ಸಮ್ಮೇಳನ ಆರಂಭಗೊoಡಿದೆ. ಇದೇ 9 ಮತ್ತು 10 ರಂದು ಸಾರ್ವಜನಿಕರಿಗೆ ಚಿತ್ರೋತ್ಸವ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ತಲಾ20 ನಿಮಿಷಗಳ ಒಟ್ಟು 9 ಚಿತ್ರಗಳ ಪ್ರದರ್ಶನವಿರುತ್ತದೆ. ಆನ್‌ಲೈನ್ ಮೂಲಕ ಚಿತ್ರದ ಟಿಕೆಟ್ ಲಭ್ಯವಿದೆ. ಸಮ್ಮೇಳನದ ಅಂಗವಾಗಿ ತಾರಾಲಯದ ಬಳಿ ವಿಜ್ಞಾನದ ವಿಶಿಷ್ಟ ಸಂಶೋಧನೆಗಳ ಪ್ರದರ್ಶನ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT