ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪಿರ್ಕಿಲು' ತುಳು ಸಿನಿಮಾ 26ರಂದು ಬಿಡುಗಡೆ

Published 23 ಮೇ 2023, 11:41 IST
Last Updated 23 ಮೇ 2023, 11:41 IST
ಅಕ್ಷರ ಗಾತ್ರ

ಮಂಗಳೂರು: ‘ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಎಚ್.ಡಿ ‌.ಆರ್ಯ ನಿರ್ದೇಶನದಲ್ಲಿ ತಯಾರಾದ ‘ಪಿರ್ಕಿಲು’ ತುಳು ಸಿನಿಮಾ ಇದೇ 26 ರಂದು ಬಿಡುಗಡೆಯಾಗಲಿದೆ.

ಈ ಕುರಿತು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿನಿಮಾದ ನಿರ್ದೇಶಕ ಎಚ್.ಡಿ.ಆರ್ಯ, ‘ಪಿರ್ಕಿಲು ಸಿನಿಮಾ ಮಂಗಳೂರಿನ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯ ಕಲ್ಪನ, ಮಣಿಪಾಲದ ಭಾರತ್ ಸಿನಿಮಾಸ್, ಐನಾಕ್ಸ್, ಪಡುಬಿದ್ರೆಯ ಭಾರತ್ ಸಿನಿಮಾ, ಸುರತ್ಕಲ್‌ನ ನಟರಾಜ್, ಸಿನಿಗ್ಯಾಲಕ್ಸಿ, ಪುತ್ತೂರಿನ ಭಾರತ್ ಸಿನಿಮಾ, ಮೂಡುಬಿದಿರೆಯ ಅಮರಶ್ರೀ, ಕಾರ್ಕಳದ ರಾಧಿಕಾ, ಪ್ಲಾನೆಟ್, ಸುಳ್ಯದ ಸಂತೋಷ್ ಬೆಳ್ತಂಗಡಿಯ ಭಾರತ್ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದರು.

‘ಸತೀಶ್ ಪೆರ್ನೆ ಹಾಗೂ ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಹಾಸ್ಯಭರಿತ ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ. ಊರಿನ ಜನರಿಂದ ಪಿರ್ಕಿಲು ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರ ಸೃಷ್ಟಿಸುತ್ತಾರೆ ಎಂಬುದನ್ನು ಹಾಸ್ಯಭರಿತವಾಗಿ ಕಟ್ಟಿಕೊಟ್ಟಿದ್ದೇವೆ. ಕುಟುಂಬದವರಿಗೆಲ್ಲ ಮನರಂಜನೆ ಒದಗಿಸುವ ಈ ಚಿತ್ರ ಎಲ್ಲಾ ವರ್ಗದ ಜನರು ಇಷ್ಟ ಪಡುವ ಭರವಸೆ ಇದೆ’ ಎಂದರು.

‘ಸಿನಿಮಾಕ್ಕೆ ಸುಳ್ಯ, ಪುತ್ತೂರು, ಮಂಗಳೂರು, ಕುರಿಯ, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ನಾಯಕರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜ, ಲತಾ ಅಭಿನಯಿಸಿದ್ದಾರೆ. ತಾರಾ ಬಳಗದಲ್ಲಿ  ಅರವಿಂದ ಬೋಳಾರ್, ಬೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಸುಮಿತ್ರ ರೈ, ಅಮಿತಾ, ನವೀನ್ ಬೋಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೊಹನ್, ಸೋನಿ ಇದ್ದಾರೆ’ ಎಂದರು.

ನಿರ್ದೇಶಕ ಎಚ್.ಡಿ. ಆರ್ಯ ಅವರೇ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಬಿತ ತುಳು ಸಂಭಾಷಣೆಯನ್ನು ತರ್ಜುಮೆಯನ್ನು ಮಾಡಿದ್ದಾರೆ. ಎ.ಆರ್ ಕೃಷ್ಣ ಮತ್ತು ಅಭಿಷೇಕ್ ರಾವ್ ಅವರು ಸಂಕಲನ, ವಿ ಮನೋಹರ ಅವರು ಸಂಗೀತ,  ವಿ.ಮನೋಹರ್‌ ಮತ್ತು ಶ್ರೀಧರ್ ಕರ್ಕೇರ ಅವರು ಸಾಹಿತ್ಯ, ಎ. ಆರ್ ಕೃಷ್ಣ ಛಾಯಾಗ್ರಹಣದಲ್ಲಿ ಸಹಕರಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಶಿವಪ್ರಸಾದ್ ಇಜ್ಜಾವು, ಸತೀಶ್ ಪೆರ್ನೆ, ಸುದೇಶ್, ಆಲಿಷಾ, ಲತಾ ಎಸ್. ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT