25ರಂದು ಬೆಳಿಗ್ಗೆ 7ರಿಂದ ಪುಣ್ಯಾಹವಾಚನ, ಮಹಮ್ಮಾಯಿ ಪ್ರತಿಷ್ಠಾ ಹೋಮ, ಕಲಶಾಭಿಷೇಕ, 8ರಿಂದ ಸಾಮೂಹಿಕ ಚಂಡಿಕಾ ಹೋಮ, 9.45ರ ವೃಷಭ ಲಗ್ನದಲ್ಲಿ ಧರ್ಮದೈವ ಮಹಿಷಂತಾಯ, ಪಿಲಿಚಾಮುಂಡಿಯ ಪ್ರತಿಷ್ಠೆ, 10ಕ್ಕೆ ಭಂಡಾರ ಹೊರಡುವುದು, 12ಕ್ಕೆ ಚಂಡಿಕಾ ಹೋಮದ ಪೂರ್ಣಹುತಿ, ಸಂಜೆ 5ರಿಂದ ದುರ್ಗಾನಮಸ್ಕಾರ, 7ರಿಂದ ಮಹಮ್ಮಾಯಿಗೆ ಹೂವಿನ ಪೂಜೆ, ಗೊಂದೋಲು ಸೇವೆ ನಡೆಯಲಿದೆ. 26ರಂದು ಬೆಳಿಗ್ಗೆ ಕಲಶಪೂಜೆ, 10.30ರಿಂದ ದೈವದ ದರ್ಶನ, ಪಲ್ಲಪೂಜೆ, ಮಧ್ಯಾಹ್ನ 1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5ರಿಂದ ಧಾರ್ಮಿಕ ಸಭೆ, 7ರಿಂದ ಹೂವಿನ ಪೂಜೆ, 8ರಿಂದ ಮಹಿಷಂತಾಯ ದೈವದ ಗಗ್ಗರ ಸೇವೆ, 10ರಿಂದ ಪಿಲಿಚಾಮುಂಡಿ ದೈವದ ನೇಮ, 27ರಂದು ಭಂಡಾರ ನಿರ್ಗಮನವಾಗಲಿದೆ.