ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಿಯಡ್ಕ: ಕೇರಳ ಸರ್ಕಾರದ ವಿರುದ್ಧ ಪ್ರತಿಭಟನೆ

Published 9 ಜೂನ್ 2023, 14:14 IST
Last Updated 9 ಜೂನ್ 2023, 14:14 IST
ಅಕ್ಷರ ಗಾತ್ರ

ಬದಿಯಡ್ಕ: ಕೇರಳ ಪ್ರದೇಶ ಶಾಲಾ ಶಿಕ್ಷಕರ ಅಸೋಸಿಯೇಶನ್ ಆಶ್ರಯದಲ್ಲಿ ಕೇರಳ ರಾಜ್ಯದಾದ್ಯಂತ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು.

ಕೇರಳ ಸರ್ಕಾರವು ಶಿಕ್ಷಕರಿಗೆ ವಿರುದ್ಧವಾದ ನಿಲುವುಗಳನ್ನು ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಮೆರವಣಿಗೆಯ ನೇತೃತ್ವ ವಹಿಸಿದ್ದ ಪ್ರಶಾಂತ್‌ ಕಾನತ್ತೂರು ಮಾತನಾಡಿ, ‘ಕೇರಳ ರಾಜ್ಯ ಸರ್ಕಾರವು ಶಿಕ್ಷಕ ಪದ್ಧತಿಯನ್ನು ಬುಡಮೇಲು ಮಾಡುತ್ತಿದೆ. ಸರ್ಕಾರದ ವಿರುದ್ಧ ಇತರ ಶಿಕ್ಷಕ ಸಂಘಟನೆಗಳ ಮೌನ ವಿಷಾದನೀಯ’ ಎಂದರು.

ಪ್ರತಿಭಟನೆಯಲ್ಲಿ ಶಿಯಾಬ್ ಮಾಸ್ತರ್‌, ಗೋಪಾಲ ಮಾಸ್ತರ್‌, ಯೂಸುಫ್ ಕೆ., ಜಲಜಾಕ್ಷಿ ಟೀಚರ್, ರಾಧಾಕೃಷ್ಣನ್ ಮಾತನಾಡಿದರು. ಶರತ್‌ಚಂದ್ರ ಶೆಟ್ಟಿ ಸ್ವಾಗತಿಸಿದರು. ರಾಮಕೃಷ್ಣನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT