ಬಿಜೆಪಿ ಹೊಸಬರಿಗೆ ಆದ್ಯತೆ

7
ಪುತ್ತೂರು ನಗರಸಭೆ:24 ಅಭ್ಯರ್ಥಿಗಳ ಪಟ್ಟಿ

ಬಿಜೆಪಿ ಹೊಸಬರಿಗೆ ಆದ್ಯತೆ

Published:
Updated:

ಪುತ್ತೂರು: ಪುತ್ತೂರು ನಗರಸಭೆಯ ಎಲ್ಲಾ 31 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸಲಿದ್ದು, ಶಾಸಕ ಸಂಜೀವ ಮಠಂದೂರು ಅವರು 24 ವಾರ್ಡ್‌ಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದರು. ಎರಡು ದಿನಗಳೊಳಗೆ ಉಳಿದ 7 ವಾರ್ಡ್‌ಗಳ ಅಭ್ಯರ್ಥಿಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಳಬರ ಜೊತೆಗೆ ಹೊಸಬರಿಗೂ ಅವಕಾಶ ನೀಡುವ ಮೂಲಕ ಬಿಜೆಪಿ ಪುತ್ತೂರು ನಗರಸಭೆಯಲ್ಲಿ ಸಮರ್ಥ ಮತ್ತು ಉತ್ತಮ ಆಡಳಿತ ನೀಡಲು ನಿರ್ಧರಿಸಿದೆ. ಪಕ್ಷದ ಬದ್ಧತೆ, ಕಾರ್ಯಕರ್ತರ ಅಪೇಕ್ಷೆಯಂತೆ ಅರ್ಹ ವಿದ್ಯಾವಂತ ಮತ್ತು ಜನಪರ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆಮಾಡಿದೆ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಆಯಾ ವಾರ್ಡ್‌ ಸಮಿತಿಗಳಿಂದ ಬಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಗಳನ್ನು ಆಧರಿಸಿ ಆಯ್ಕೆ ಮಾಡಲಾಗಿದೆ ಎಂದರು.

ಪ್ರಕಟಿಸಲಾದ 24 ಮಂದಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನಾಲ್ವರು ಹಾಲಿ ಸದಸ್ಯರಿಗೆ ಮರು ಅವಕಾಶ ನೀಡಲಾಗಿದೆ. ಚಿಕ್ಕಮುಡ್ನೂರು ಎರಡನೇ ವಾರ್ಡ್‌ನದ ಸುಂದರ ಪೂಜಾರಿ ಬಡಾವು, ಪುತ್ತೂರು ಕಸಬಾ 2ನೇ ವಾರ್ಡ್‌ನಿಂದ ರಮೇಶ್ ರೈ ಮೊಟ್ಟೆತ್ತಡ್ಕ, ಪುತ್ತೂರು ಕಸಬಾ 5ನೇ ವಾರ್ಡ್‌ದ ಯಶೋಧಾ ಪೂಜಾರಿ, ಪುತ್ತೂರು ಕಸಬಾ 15ನೇ ವಾರ್ಡ್‌ನಿಂದ ಬಾಲಚಂದ್ರ ಅವರಿಗೆ ಅವಕಾಶ ನೀಡಲಾಗಿದೆ. ಈ ನಾಲ್ವರು ಹಾಲಿ ಸದಸ್ಯರು ಪ್ರತಿನಿಧಿಸಿದ್ದ ವಾರ್ಡ್‌ಗಳು ಹೊಸ ವಾರ್ಡ್‌ಗಳ ಸೃಷ್ಟಿಯಿಂದಾಗಿ ಪಲ್ಲಟಗೊಂಡಿವೆ ಎಂದರು.

ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಪ್ರಣಾಳಿಕೆ ಸಮಿತಿಯ ಪ್ರಮುಖ ಗೋಪಾಲಕೃಷ್ಣ ಹೇರಳೆ, ನಗರಸಭೆಯ ಹಾಲಿ ಸದಸ್ಯ ರಾಜೇಶ ಬನ್ನೂರು, ಪಕ್ಷದ ಪ್ರಮುಖರಾದ ಕೇಶವ ಗೌಡ ಪುಯಿಲ, ಚಂದ್ರಶೇಖರ ರಾವ್ ಬಪ್ಪಳಿಗೆ, ಗೌರಿ ಬನ್ನೂರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !