ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಕ್ಷೇತ್ರದ ಪ್ರಧಾನ ದೈವವಾದ ಧೂಮಾವತಿ ನೇಮೋತ್ಸವ ನಡೆಯಿತು.

ಬೆಳಿಗ್ಗೆ ಗಣಪತಿ ಹೋಮ, ಧೂಮಾವತಿ ಸಾನ್ನಿಧ್ಯದಲ್ಲಿ ಶುದ್ಧಿ ಕ್ರಿಯೆಗಳು ನಡೆದವು. ಬಳಿಕ ಧೂಮಾವತಿ ದೈವದ ಭಂಡಾರ ಇಳಿದು ಧೂಮಾವತಿ ನೇಮೋತ್ಸವ ನಡೆಯಿತು. ಮಧ್ಯಾಹ್ನ ಸತ್ಯಧರ್ಮ ಚಾವಡಿಯಲ್ಲಿ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ, ಡಾ.ರಾಜಶೇಖರ ಕೋಟ್ಯಾನ್, ಜಯಂತ ನಡುಬೈಲು, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮೊಕ್ತೇಸರ ಶ್ರೀಧರ ಪೂಚಾರಿ ಗೆಜ್ಜೆಗಿರಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ರಾಜರಾಮ್ ಕೆ.ಬಿ., ಕೋಶಾಧಿಕಾರಿ ಮೋಹನ್ದಾದ್ ವಾಮಂಜೂರು, ಪ್ರಮುಖರಾದ ಸಂಜೀವ ಪೂಜಾರಿ ಬಿರ್ವ, ಶೈಲೇಂದ್ರ ವೈ ಸುವರ್ಣ, ದೀಪಕ್ ಕೋಟ್ಯಾನ್, ಉಲ್ಲಾಸ್ ಕೋಟ್ಯಾನ್, ಹರೀಶ್ ಸಾಲ್ಯಾನ್ ಮುಂಬೈ, ಪ್ರಶಾಂತ್ ಪೂಜಾರಿ ಮಸ್ಕತ್, ಪ್ರಮಲ್ ಕುಮಾರ್ ಕಾರ್ಕಳ, ರಾಜೇಂದ್ರ ಚಿಲಿಂಬಿ, ಪದ್ಮರಾಜ್ ಆರ್.ಪೂಜಾರಿ, ಸತೀಶ್ ಕೆಡೆಂಜಿ, ವಿಜಯಕುಮಾರ್ ಸೊರಕೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.