ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಪಾವತಿಗೆ ಬಾಕಿ ಇರುವ ವಿಟ್ಲ ಮತ್ತು ಬಲ್ನಾಡು ಗ್ರಾಮದ ರೈತರಿಗೆ ಶೀಘ್ರವಾಗಿ ಬೆಳೆವಿಮೆ ಮಂಜೂರಾಗಲಿದೆ. ಸಮರ್ಪಕವಾಗಿ ಕಾರ್ಯನಿರ್ವಹಿಸದ ಮಳೆಮಾಪಕಗಳನ್ನು ದುರಸ್ತಿಗೊಳಿಸುವ, ಅಥವಾ ಹೊಸ ಮಳೆಮಾಪನ ಅಳವಡಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಈ ಬಗ್ಗೆ ಶೀಘ್ರ ಕ್ರಮವಹಿಸಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಕುರಿತು ಬೆಂಗಳೂರಿನ ವಿಧಾನಸೌಧ ಕಚೇರಿಯಲ್ಲಿ ಮಂಗಳವಾರ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಕೀಲ್ ಅಹ್ಮದ್ ಜತೆ ಸಭೆ ನಡೆಸಿದ ಬಳಿಕ ಶಾಸಕ ಅಶೋಕ್ ರೈ ಅವರು ಈ ಮಾಹಿತಿ ನೀಡಿದ್ದಾರೆ.

ಕೋಡಿಂಬಾಡಿ, ಕೊಡಿಪ್ಪಾಡಿ, ವಿಟ್ಲ ಹಾಗೂ ಬಲ್ನಾಡು ಗ್ರಾಮದ ರೈತರಿಗೆ ಕಾಳುಮೆಣಸು ವಿಮೆ ಮಾತ್ರ ಮಂಜೂರಾಗಿದೆ. ಅಡಿಕೆ ಬೆಳೆ ವಿಮೆ ಮಂಜೂರಾಗಿರಲಿಲ್ಲ, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಈ ಪೈಕಿ ಕೊಡಿಪ್ಪಾಡಿ ಮತ್ತು ಕೋಡಿಂಬಾಡಿ ಗ್ರಾಮದ ರೈತರಿಗೆ ವಿಮಾ ಪರಿಹಾರ ಹಣ ಮಂಜೂರಾಗಿದ್ದು, ರೈತರ ಖಾತೆಗಳಿಗೆ ಜಮೆಯಾಗಲಿದೆ. ವಿಟ್ಲ ಮತ್ತು ಬಲ್ನಾಡು ಗ್ರಾಮದ ರೈತರಿಗೆ ಶೀಘ್ರದಲ್ಲೇ ವಿಮಾ ಪರಿಹಾರ ಮೊತ್ತ ಮಂಜೂರಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವಿಮಾ ಕಂತು ಪಾವತಿ ಮಾಡಿದವರ ಪೈಕಿ 6ಸಾವಿರ ಮಂದಿಯ ಖಾತೆಗಳಿಗೆ ಕೆವೈಸಿಯಾಗದ ಕಾರಣ ಅವರಿಗೆ ವಿಮಾ ಕಂಪನಿಯಿಂದ ವಿಮೆ ಪಾವತಿಯಾಗಿಲ್ಲ. ಜಮೆಯಾಗದ ಈ ಖಾತೆಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳುವ ಬಗ್ಗೆ ಇನ್ನೊಂದು ಹಂತದ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.