ಮಂಗಳವಾರ, ನವೆಂಬರ್ 19, 2019
29 °C

ಯಕ್ಷಗಾನ ಕಲಾವಿದ ರಾಮ ಹೆಗಡೆ ಕೆರೆಮನೆ ನಿಧನ

Published:
Updated:

ಬೆಂಗಳೂರು: ಯಕ್ಷಗಾನದ ಮಹಾಬಲರೆಂದೇ ಖ್ಯಾತರಾಗಿದ್ದ ಡಾ.ಕೆರೆಮನೆ ಮಹಾಬಲ ಹೆಗಡೆಯವರ ಪುತ್ರ ಪ್ರೊ.ರಾಮ ಹೆಗಡೆ ಕೆರೆಮನೆ (67)  ಬುಧವಾರ ನಿಧನರಾಗಿದ್ದಾರೆ. 

ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲಿದ್ದ ರಾಮ ಹೆಗಡೆ  ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯಲ್ಲಿ ಗಣಿತದ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ಇತ್ತೀಚೆಗೆ ಯಕ್ಷರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಯಕ್ಷಗಾನದಲ್ಲಿರುವ ಅನೇಕ ಹಳೆಯ ರಾಗಗಳ ಕುರಿತು ಆಳವಾದ ಅಧ್ಯಯನ ಮಾಡಿದ್ದರು. ಈ ಕುರಿತು ಒಂದು ದೀರ್ಘವಾದ ವಿಡಿಯೊ ಕ್ಯಾಸೆಟ್‌ ಮಾಡಲು ತಯಾರಿ ಮಾಡಿಕೊಂಡಿದ್ದರು.

ನೃತ್ಯಗಾರರೂ, ಹಾಡುಗಾರರೂ ಆಗಿದ್ದ ರಾಮ ಹೆಗಡೆ ಅವರು ಮೃದಂಗ ವಾದನದಲ್ಲೂ ನಿಪುಣರಾಗಿದ್ದರು.

ಮೃತರ ಅಂತ್ಯಕ್ರಿಯೆಯು ಬುಧವಾರ ಸಂಜೆ ಕೆರೆಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)