ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ‘ಜಿಲ್ಲೆಯ ಇತಿಹಾಸ ದಾಖಲಿಸಿ’

ಬಂಟ್ವಾಳ: 'ಅಮೃತ ಭಾರತಿಗೆ ಗಾನ-ನುಡಿಯ ದೀವಿಗೆ'
Last Updated 13 ಆಗಸ್ಟ್ 2022, 14:14 IST
ಅಕ್ಷರ ಗಾತ್ರ

ಬಂಟ್ವಾಳ: ‘ದೇಶದಲ್ಲಿ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲು ಅವಿಭಜಿತ ಜಿಲ್ಲೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‍ಪೋರ್ಚುಗೀಸರು ಹಾಗೂ ಮತ್ತು ಬ್ರಿಟೀಷರ ವಿರುದ್ಧ ಹೋರಾಟ ನಡೆದಿತ್ತು. ಇಲ್ಲಿನ ಹೋರಾಟಗಳ ಬಗ್ಗೆ ಇತಿಹಾಸ ರಚನೆ ಮತ್ತು ದಾಖಲೀಕರಣಗೊಳಿಸುವಲ್ಲಿ ಎಡವಿದ್ದೇವೆ’ ಎಂದು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಬ್ರಹ್ಮರಕೂಟ್ಲುನಲ್ಲಿ ಶನಿವಾರ ಏರ್ಪಡಿಸಿದ್ದ ‘ಅಮೃತ ಭಾರತಿಗೆ ಗಾನ-ನುಡಿಯ ದೀವಿಗೆ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಬಳಿಕ ಜಗದೀಶ್ ಆಚಾರ್ಯ ಪುತ್ತೂರು ತಂಡದಿಂದ ನಡೆದ ‘ದೇಶಭಕ್ತಿ ಗೀತೆ ಗಾಯನ’ ನಡೆಯಿತು.

ಜಾಥಾ:ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ವಾಹನ ಜಾಥಾ ಹಮ್ಮಿಕೊಂಡಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲ್‌, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಮುಖಂಡ ಕೆ.ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ.ಕೆ.ಭಟ್, ಜಗದೀಶ ಶೇಣವ, ಕೆ.ಪಿ.ಜಗದೀಶ ಅಧಿಕಾರಿ, ಮಾಧವ ಮಾವೆ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ರಾಮದಾಸ್ ಬಂಟ್ವಾಳ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕಾರ್ಕಳ, ರಮಾನಾಥ ರಾಯಿ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ ಇದ್ದರು.

ತಹಶೀಲ್ದಾರ್ ಡಾ.ಸ್ಮಿತಾ ರಾಮು, ಇ.ಒ.ರಾಜಣ್ಣ, ಎಸ್ಪಿ ಹೃಷಿಕೇಶ್ ಸೋನವಾಣೆ, ಡಿವೈಎಸ್ಪಿ ಪ್ರತಾಪ್ ಪಿ.ಥೋರಾಟ್, ಇನ್‌ಸ್ಪೆಕ್ಟರ್ ವಿವೇಕಾನಂದ, ಟಿ.ಡಿ.ನಾಗರಾಜ್, ಸಬ್‌ ಇನ್‌ಸ್ಪೆಕ್ಟರ್‌ ಅವಿನಾಶ್, ಹರೀಶ್, ಪುರಸಭಾ ಮುಖ್ಯಾಧಿಕಾರಿ ಸ್ವಾಮಿ, ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ.ಸೋಜ, ಬೂಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT